ಬೆಳ್ತಂಗಡಿ : ಇಲ್ಲಿಯ ಲೋಬೊ ನಿವಾಸದ ಮಾರ್ಟಿನ್ ಲೋಬೊ ರವರ ಪುತ್ರ ನಿವೃತ್ತ ಸೇಲ್ಸ್ ಟ್ಯಾಕ್ಸ್ ಇನ್ಸ್ಫೆಕ್ಟರ್ ತೋಮಸ್ ಲೋಬೊ (76ವರ್ಷ ) ಅಲ್ಪ ಕಾಲದ ಅಸೌಖ್ಯದಿಂದ ಬಳಲಿ ಇಂದು ಸಂಜೆ (ಜೂ.4ರಂದು) ಬಾದ್ಯಾರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ ನಿವೃತ್ತ ಶಿಕ್ಷಕಿ ಬ್ರಿಜಿತ್ ಫೆರ್ನಾಂಡಿಸ್ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಮೃತರ ಅಂತಿಮ ಕ್ರಿಯೆಯು ನಾಳೆ ಜೂ.5ರಂದು ಬೆಳ್ತಂಗಡಿ ಹೊಲಿ ರಿಡಿಮರ್ ಚರ್ಚ್ ನಲ್ಲಿ 4ಗಂಟೆಗೆ ನಡೆಯಲಿದೆ