ಗ್ರಾಮಾಂತರ ಸುದ್ದಿ

ಅಳದಂಗಡಿ: ಶ್ರೀ ಸತ್ಯದೇವತಾ ದೈವಸ್ಥಾನದ ವತಿಯಿಂದ 19ನೇವರ್ಷದ ಉಚಿತ ಪುಸ್ತಕ ವಿತರಣೆ: ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ

ಅಳದಂಗಡಿ: ಇತಿಹಾಸ ಪ್ರಸಿದ್ಧ ಅಳದಂಗಡಿ ಶ್ರೀ ಸತ್ಯದೇವತೆ ಕಲ್ಲುರ್ಟಿ ದೈವಸ್ಥಾನದ ವತಿಯಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ನೀಡುತ್ತಿರುವ 19ನೇ ವರ್ಷದ ಉಚಿತ ಪುಸ್ತಕ ವಿತರಣೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವು ಜೂ.5 ರಂದು ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ವಠಾರದಲ್ಲಿ ನಡೆಯಿತು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಮಹಾಲಿಂಗ ನಾಯ್ಕ ಅಮೈ ನೇರವೇರಿಸಿ ಶುಭ ಕೋರಿದರು.


ಅಳದಂಗಡಿಯ ಅರಮನೆಯ ತಿಮ್ಮಣ್ಣ ರಸರಾದ ಡಾ. ಪದ್ಮಪ್ರಸಾದ್‌ ಅಜಿಲರು ಸಮಾರಂಭದ ಅಧ್ಯಕ್ಷತೆ ವಹಿಸಿದರು . ವೇದಿಕೆಯಲ್ಲಿ‌ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಲ್ಲಾ‌ ಧಾರ್ಮಿಕ ದತ್ತಿ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಅಳದಂಗಡಿ ಗ್ರಾ.ಪಂ ಅಧ್ಯಕ್ಷೆ ಸೌಮ್ಯ ಹರಿಪ್ರಸಾದ್, ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ ಉಪಸ್ಥಿತರಿದ್ದರು.
ವಿಶೇಷ ಗೌರವ ಪುರಸ್ಕೃತರು: ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶ ಪುರಸ್ಕೃತ ಮಹಾಲಿಂಗ ನಾಯ್ಕ ಅಮೈ, ಅಂತಾರಾಷ್ಟ್ರೀಯ ಕ್ರೀಡಾಪಟು ಅಕ್ಷತಾ ಪೂಜಾರಿ ಬೋಳ, ಭಾರತೀಯ ಭೂ ಸೇನೆಯ ಸೈನಿಕರಾದ ಕೃಷ್ಣಾನಾಂದ, ಹರೀಶ್‌ ಚಂದ್ರ, ರಜನೀಶ್, ಪ್ರತಿಭಾವಂತ ಸ್ಟೇಟ್ ಬ್ಯಾಂಕ್ ಉದ್ಯೋಗಿ ಸಂಧ್ಯಾ ಹಾಗೂ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಾದ ರೋಶನ್ ಮಚ್ಚಿನ, ಹಾಗೂ ಮಧುಶ್ರೀ ಬೆಳ್ತಂಗಡಿ ಇವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಅಜಿತ್ ಕುಮಾರ್ ಕಾಯ೯ಕ್ರಮ ನಿವ೯ಹಿಸಿದರು.

ನಿಮ್ಮದೊಂದು ಉತ್ತರ