ಕ್ರೈಂ ವಾರ್ತೆ

ಯುವತಿ ನಾಪತ್ತೆ:‌ ಪೊಲೀಸ್ ದೂರು ದಾಖಲು

ಬೆಳ್ತಂಗಡಿ:ಕರಿಮಣೇಲು ಗ್ರಾಮದ ದರ್ಖಾಸು ಮನೆಯ ಸೇಸಪ್ಪ ನಾಯ್ಕ ಎಂಬುವರ ಪುತ್ರಿ ಸಂಧ್ಯಾ (22) ಎಂಬವರು ಕಾಣೆಯಾದ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ .

ಸಂಧ್ಯಾ ಅವರು ನ.4ರಂದು ಮನೆಯಿಂದ ಕೆಲಸಕ್ಕೆ ಹೋದವರು ಸಂಜೆ 5ಗಂಟೆಸುಮಾರಿಗೆ ತನ್ನ ಸಹೋದರಿಯ ಮೊಬೈಲ್ ಗೆ ‘ನನಗೆ ಮದುವೆಯಾಗಿದೆ. ನನ್ನನ್ನು ಹುಡುಕಬೇಡಿ’ ಎಂಬುದಾಗಿ ವಾಟ್ಸಾಪ್ ಸಂದೇಶ ಕಳುಹಿಸಿದ್ದು ಯುವಕನೊಬ್ಬನ ಜತೆ ತೆಗೆದಿರುವ ಭಾವಚಿತ್ರ ರವಾನಿಸಿದ್ದಾರೆ.ಬಳಿಕ ಆಕೆಯ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಆಕೆ ಕೆಲಸ ಮಾಡುವ ಕಡೆ ವಿಚಾರಿಸಿದಾಗ ಆಕೆ ಅಂದು ಕೆಲಸಕ್ಕೆ ಬಂದಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಿಮ್ಮದೊಂದು ಉತ್ತರ