ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ. ಇದು ಹಲವು ಜನರ ತಿಳುವಳಿಕೆ. ನಿಜವಾದರೂ ಈಗಿನ ಬದಲಾದ ಜೀವನಶೈಲಿಯ ಕಾರಣದಿಂದಾಗಿ ಬರುವ ಸ್ಥೂಲಕಾಯ ಹಾಗು ಕೊಲೆಸ್ಟರಾಲ್ ಸಮಸ್ಯೆಗೆ ಮೊಟ್ಟೆ ಆದಷ್ಟು ದೂರವೇ ಉಳಿದಿದೆ. ಆದರೆ ಸಾಮಾನ್ಯ ಕೋಳಿಯ ಮೊಟ್ಟೆ ಬದಲಾಗಿ ಈ ಕೋಳಿಯ ಮೊಟ್ಟೆ ಹಾಗು ಮಾಂಸ ಬಹಳ ಆರೋಗ್ಯಕಾರಿ. ಈ ಕೋಳಿಯನ್ನ ದೇಸಿ ಭಾಷೆಯಲ್ಲಿ ಗೌಜಲಕ್ಕಿ, ಕಾಡಾ ಕೋಳಿ ಅಂತ ಕರೀತಾರೆ. ತಲಾ 60-70ರೂ ಬೆಲೆಬಾಳುವ ಈ ಕೋಳಿ ಸಾಮಾನ್ಯ ಕೋಳಿಗಿಂತ ತೂಕ ಕಮ್ಮಿ. ಇಂಗ್ಲಿಷ್ ಭಾಷೆಯಲ್ಲಿ ಇದನ್ನ ಕ್ವಿಲ್ ಬರ್ಡ್ ಅಂತ ಕರೀತಾರೆ.
ಕ್ವಿಲ್ಗಳು ಯುರೋಪ್, ಉತ್ತರ ಆಫ್ರಿಕಾ, ದಕ್ಷಿಣ ಯುನೈಟೆಡ್ ಸ್ಟೇಟ್ಸ್ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಕಂಡುಬರುವ ಮಧ್ಯಮ ಗಾತ್ರದ ಪಕ್ಷಿಗಳಾಗಿವೆ. ಕ್ವಿಲ್ ಮೊಟ್ಟೆಗಳು ಬಿಳಿ ಹಾಗೂ ಕಂದು ಬಣ್ಣದ ಚುಕ್ಕೆಗಳನ್ನು ಹೊಂದಿರುತ್ತವೆ. ಆಹಾರ ಮತ್ತು ವಿಶ್ವಸಂಸ್ಥೆಯ ಕೃಷಿ ಸಂಸ್ಥೆ ಇದನ್ನು ಸಮತೋಲಿತ ಆಹಾರದಲ್ಲಿ ಸೇರಿಸುತ್ತದೆ!! ಈ ಕೋಳಿಯ ಮೊಟ್ಟೆಯ ಆಶ್ಚರ್ಯಕರ ಪ್ರಯೋಜನಗಳನ್ನ ನಾವು ನಿಮಗೆ ತಿಳಿಸ್ತೀವಿ ಬನ್ನಿ..
ಕ್ವಿಲ್ ಮೊಟ್ಟೆಗಳು, ದೃಷ್ಟಿ ಸುಧಾರಿಸುವ, ಶಕ್ತಿಯ ಮಟ್ಟವನ್ನು ಹೆಚ್ಚಿಸುವ ಮತ್ತು ಬೆಳವಣಿಗೆಗೆ ಉತ್ತೇಜನ ನೀಡುವ ಸಾಮರ್ಥ್ಯವನ್ನು ಒಳಗೊಂಡಿವೆ. ಕ್ವಿಲ್ ಮೊಟ್ಟೆಗಳು ರಕ್ತಹೀನತೆಯ ಅಪಾಯವನ್ನು ಕಡಿಮೆ ಮಾಡಲು, ದೇಹವನ್ನು ಶುದ್ಧೀಕರಿಸಲು, ಮಿತಿಯಲ್ಲಿ ಸೇವಿಸಿದಾಗ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸಲು, ಚಯಾಪಚಯವನ್ನು ಹೆಚ್ಚಿಸಲು ಮತ್ತು ವಿವಿಧ ರೀತಿಯ ಅಲರ್ಜಿಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.