ಬೆಳ್ತಂಗಡಿ: ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟ ಕರ್ನಾಟಕ ತಂಡಕ್ಕೆ ಭರತೇಶ್ ಗೌಡ ಮೈರೋಳ್ತಡ್ಕ, ಬಂದಾರು ಆಯ್ಕೆಯಾಗಿದ್ದಾರೆ.
ಅ. 29 ರಿಂದ 31ರ ವರೆಗೆ ಹರಿಯಾಣ ವಿಶ್ವವಿದ್ಯಾಲಯ ದಲ್ಲಿ ಪಂದ್ಯಾಕೂಟ ನಡೆಯಲಿದೆ.
ಪ್ರಸ್ತುತ ಇವರು ವಿವೇಕಾನಂದ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ಪದವಿ ವಿದ್ಯಾರ್ಥಿ,ಬೆಳ್ತಂಗಡಿ ವಾಣಿ ಪಿ,ಯು ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ ಪಿ,ಯು
ವಿದ್ಯಾಭ್ಯಾಸದ ಸಂದರ್ಭದಲ್ಲೂ ರಾಷ್ಟಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿ ಉತ್ತಮ ಪ್ರದರ್ಶನದೊಂದಿಗೆ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದರು. ಇವರು ಬಂದಾರು ಗ್ರಾಮದ ಮೈರೋಳ್ತಡ್ಕ, ನೆಲ್ಲಿದಖಂಡ ಬೊಮ್ಮಣ್ಣ ಗೌಡ ಮತ್ತು ಶ್ರೀಮತಿ ಚೆಲುವಮ್ಮ ದಂಪತಿಗಳ ಪುತ್ರರಾಗಿದ್ದಾರೆ.
ಉತ್ತಮ ವರದಿಯ ಮಾಧ್ಯಮ