ಮಚ್ಚಿನ: ಇಲ್ಲಿಯ ಬಂಗಲಾಯಿ ನಿವಾಸಿ ಬ್ರಹ್ಮ ಶ್ರೀ ಕೇಶವ ಜೋಗಿತ್ತಾಯ (80ವ) ಅವರು ವಯೋಸಹಜವಾಗಿ ಇಂದು ಸಂಜೆ ಮೇ 24ರಂದು ಸ್ವಗೃಹದಲ್ಲಿ ನಿಧನರಾದರು.
ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಚ೯ಕರಾಗಿ, ಪ್ರಧಾನ ಆಚ೯ಕರಾಗಿ ಸುಮಾರು 50 ವಷ೯ಗಳ ಸೇವೆ ಸಲ್ಲಿಸಿದ್ದ ರು. ತಣ್ಣೀರುಪಂತ ಶ್ರೀ ರುದ್ರಗಿರಿ ಮೃತ್ಯುಂಜಯ
ದೇವಸ್ಥಾನದ ನಿಮಾ೯ಣ ಕಾಯ೯ದಲ್ಲಿ ಮಾಗ೯ದಶ೯ಕರಾಗಿ, ಸಮಿತಿಯ ಗೌರವಾಧ್ಯಕ್ಷರಾಗಿ, ತಂತ್ರಿಗಳಾಗಿ ಕಾಯ೯ನಿವ೯ಹಿಸಿದ್ದರು.
ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪಾರ ಅನುಭವವನ್ನು ಪಡೆದಿದ್ದ ಜೋಗಿತ್ತಾಯ ಅವರು ಹಲವಾರು ದೇವಸ್ಥಾನಗಳ ನಿಮಾ೯ಣಕ್ಕೆ ಮಾಗ೯ದಶ೯ನ ನೀಡಿದ್ದರು. ಇವರ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.ಮೃತರು ಪತ್ನಿ ಇಬ್ಬರು ಪುತ್ರರು , ಓವ೯ ಪುತ್ರಿ , ಬಂಧು ವಗ೯ ಹಾಗೂ ಕುಟುಂಬಸ್ಥರನ್ನು ಆಗಲಿದ್ದಾರೆ.