ನಿಧನ ಸುದ್ದಿ

ಪಿಲಾತಬೆಟ್ಟು ಕುದುಂಬು ದೋಟ ನಿವಾಸಿ ಯಶವಂತ ಗೌಡ ನಿಧನ

ಪುಂಜಾಲಕಟ್ಟೆ: ಪಿಲಾತಬೆಟ್ಟು ಗ್ರಾಮದ ಕುದುಂಬು ದೋಟ ಮನೆ ನಿವಾಸಿ ಯಶವಂತ ಗೌಡ(52.ವ) ರವರು ಹೃದಯಾಘಾತದಿಂದ ಅ.5 ರಂದು ರಾತ್ರಿ ನಿಧನರಾದರು.

ಪ್ರಗತಿಪರ ಕೃಷಿಕರಾಗಿದ್ದ ಇವರು ಪುಂಜಾಲಕಟ್ಟೆ ಬಸವನಗುಡಿ ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ, ಪಾರೆಂಕಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರಾಗಿ, ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ ಸುಧಾ, ಪುತ್ರ ಆರ್ಥಿಕ್, ಪುತ್ರಿ ಅನ್ಯತಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ನಿಮ್ಮದೊಂದು ಉತ್ತರ