ತಾಲೂಕು ಸುದ್ದಿ

ಬಿಜೆಪಿ:`ಸೇವೆ ಮತ್ತು ಸಮರ್ಪಣಾ ಅಭಿಯಾನ’ ವಿಚಾರ ಸಂಕಿರಣ

ಎಲ್ಲಾ ಕ್ಷೇತ್ರಗಳಲ್ಲೂ ಭಾರತ ಸಾಧನೆ ಮೆರೆಯುತ್ತಿದೆ: ತೇಜಸ್ವಿನಿ


ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಇದರ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ೭೧ನೇ ಹುಟ್ಟುಹಬ್ಬದ ಪ್ರಯುಕ್ತ ಹಾಗೂ ಸಮರ್ಥ ಆಡಳಿತದ ೨೦ ವರ್ಷಗಳ ಅಂಗವಾಗಿ ಹಮ್ಮಿಕೊಂಡ `ಸೇವೆ ಮತ್ತು ಸಮರ್ಪಣಾ ಅಭಿಯಾನ’ ವಿಚಾರ ಸಂಕಿರಣ ಕಾರ್ಯಕ್ರಮ ಅ.೬ರಂದು ಬೆಳ್ತಂಗಡಿ ಶ್ರೀ ಧ.ಮಂ ಕಲಾಭವನದಲ್ಲಿ ಜರುಗಿತು.
ವಿಧಾನ ಪರಿಷತ್ ಶಾಸಕಿ ಹಾಗೂ ರಾಜ್ಯ ವಕ್ತಾರೆ ಶ್ರೀಮತಿ ತೇಜಸ್ವಿನಿ ರಮೇಶ್ ಅವರು ಮಾತನಾಡಿ,ಭಾರತದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗುವ ಮೊದಲು ದೇಶದ ಸುರಕ್ಷತೆ, ಅಸ್ಮಿಯತೆ ಅಪಾಯದಲ್ಲಿತ್ತು. ಭಾರತ ಪ್ರತಿಯೊಂದಕ್ಕೆ ವಿದೇಶಗಳಿಗೆ ಕೈಯೊಡ್ಡುವ ಸ್ಥಿತಿಯಲ್ಲಿತ್ತು. ಇಂದು ಎಲ್ಲಾ ಕ್ಷೇತ್ರಗಳಲ್ಲೂ ಭಾರತ ಸಾಧನೆಯನ್ನು ಮೆರೆದಿದ್ದು, ೭ ವರ್ಷಗಳಲ್ಲಿ ಭಾರತವನ್ನು ಶ್ರೇಷ್ಠ ಭಾರತವಾಗಿ ಮೋದಿಯವರು ನಿರ್ಮಿಸಿದ್ದಾರೆ. ಇಂದು ಬೇರೆ ದೇಶಗಳಿಗೆ ನೀಡುವ ಕೈಯಾಗಿ ಭಾರತ ಪರಿವರ್ತನೆಯನ್ನು ಕಂಡಿದೆ ಎಂದು ಮೋದಿಯವರ ಸಾಧನೆಗಳ ಬಗ್ಗೆ ಮಾತನಾಡಿದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಮಾತನಾಡಿ, ಪ್ರಧಾನಿ ಮೋದಿಯವರು ಜಗತ್ತು ಗೌರವದಿಂದ ನೋಡುವ ದಿಕ್ಕಿನಲ್ಲಿ ನಮ್ಮ ರಾಷ್ಟ್ರ ರಥವನ್ನು ಎಳೆಯುತ್ತಿದ್ದು, ಇದಕ್ಕೆ ನಾವೆಲ್ಲ ಕೈಜೋಡಿಸಬೇಕು ಎಂದರು. ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್ ಅಧ್ಯಕ್ಷತೆ ವಹಿಸಿ, ಮೋದಿಯವರ ಹುಟ್ಟು ಹಬ್ಬದ ಸವಿನೆನಪಿಗಾಗಿ ಮಂಡಲದ ವತಿಯಿಂದ ತಾಲೂಕಿನಲ್ಲಿ 380 ಕಡೆಗಳಲ್ಲಿ ಶ್ರಮದಾನ ಕಾರ್ಯ, 241 ಬೂತುಗಳಲ್ಲಿ ದೀನ ದಯಾಳ್ ಜನ್ಮದಿನಾಚರಣೆ, 12ಸಾವಿರ ಪೋಸ್ಟ್ ಕಾರ್ಡ್, 80 ಕಡೆಗಳಲ್ಲಿ ಸಾಧಕರಿಗೆ ಸನ್ಮಾನ, 71 ಮಂದಿ ಸಂಘದ ಹಿರಿಯರಿಗೆ ಗೌರವ, 82 ಮಂದಿ ದೈವರಾಧಕರು ಮತ್ತು ಸ್ವಚ್ಚತೆಗಾರರನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಳ್ತಂಗಡಿ ತಾಲೂಕಿನಿಂದ ಹುಟ್ಟು ಹಬ್ಬ ಶುಭಾಶಯ ಕೋರಿದ.12 ಸಾವಿರ ಪೊಸ್ಟ್ ಕಾರ್ಡ್‌ಗಳನ್ನು ಕಳುಹಿಸಲಾಯಿತು. ವೇದಿಕೆಯಲ್ಲಿ ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ರಾವ್, ಗಣೇಶ್ ಗೌಡ ನಾವೂರು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ