ಗ್ರಾಮಾಂತರ ಸುದ್ದಿ

ತುಳು ರಾಜ್ಯದ ಅಧಿಕೃತ ಭಾಷೆಯಾಗುವವರೆಗೆ ಒಕ್ಕೂಟ ಹೋರಾಟ : ಅಧ್ಯಕ್ಷ ಸುರೇಂದ್ರ ಕೋಟ್ಯಾನ್

ಬೆಳ್ತಂಗಡಿ: ಸಾವಿರಾರು ವರ್ಷಗಳ ಇತಿಹಾಸವುಳ್ಳ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆ ಎಂದು ಘೋಷಿಸಬೇಕೆಂದು ಸರಕಾರವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಅ.೫ರಂದು ದಕ ಜಿಲ್ಲಾಧಿಕಾರಿ ಕಛೇರಿಯ ಎದುರು ಸಭೆ ಸೇರಿ ಸರಕಾರಕ್ಕೆ ಮನವಿ ನೀಡುವ ಬಗ್ಗೆ ತುಳುನಾಡ್ ಒಕ್ಕೂಟ ಬೆಳ್ತಂಗಡಿ ಮತ್ತು ಇತರೆ ತುಳು ಪರ ಸಂಘಟನೆಗಳು ತೀರ್ಮಾನಿಸಿದ್ದವು.
ಆದರೆ ಕೊವಿಡ್ ನಿಯಮಾವಳಿಯ ಕುಂಟು ನೆಪ ಹೇಳಿ ಅಧಿಕಾರಿಗಳು ಸಭೆ ನಡೆಸದಂತೆ ತುಳು ಪರ ಹೋರಾಟಕ್ಕೆ ಅಡ್ಡಿ ಪಡಿಸಿರುತ್ತಾರೆ .ತುಳು ನಾಡಿನ ಜನರ ಮತ ಪಡೆದು ಚುನಾಯಿತರಾದ ಜನ ಪ್ರತಿನಿಧಿಗಳು ಕೂಡ ತುಳು ಪರವಾದ ಧ್ವನಿ ಎತ್ತದೆ ಇರುವುದು ವಿಪರ್ಯಾಸವೆ ಸರಿ.
ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಕೈ ಹಾಕಿರುವ ಅಧಿಕಾರಿಗಳ ವರ್ತನೆಯನ್ನು ತುಳುನಾಡ್ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ.ಮತ್ತು ತುಳು ರಾಜ್ಯದ ಅಧಿಕೃತ ಭಾಷೆಯಾಗುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತುಳುನಾಡ್ ಒಕ್ಕೂಟ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಸುರೇಂದ್ರ ಕೋಟ್ಯಾನ್  ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ