ಬೆಳ್ತಂಗಡಿ: ವಿದ್ಯಾ ಕ್ಯಾಟರಿಂಗ್ ಮಾಲಕ
ನಾಲ್ಕೂರು ಗ್ರಾಮದ ಗುತ್ತು ಮನೆತನದ ದಯಾನಂದ ಶೆಟ್ಟಿ ಯೆಕುರಿ (55ವ) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಕಳೆದ ಕೆಲ ದಿನಗಳಿಂದ ಆರೋಗ್ಯದಲ್ಲಿ ಏರು ಪೇರುಗಿದ್ದರಿಂದ ಮಂಗಳೂರಿನ ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆ.24 ರಂದು ನಿಧನರಾದರು.
ದಯಾನಂದ ಶೆಟ್ಟಿಯವರು ವಿದ್ಯಾ ಕ್ಯಾಟರಿಂಗ್ ನಡೆಸುತ್ತಿದ್ದು, ಪ್ರಗತಿ ಪರ ಕೃಷಿಕರಾಗಿ, ನಾಲ್ಕೂರು ಕಂಚಿನಡ್ಕ ದೇವಸ್ಥಾನದ ಅಭಿವೃದ್ಧಿಯ ರೂವಾರಿಯಾಗಿ, ಕೊಡುಗೈ ದಾನಿಯಾಗಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.
ಮೃತರು ಪತ್ನಿ ಪುಷ್ಪಾವತಿ, ಒರ್ವ ಪುತ್ರ ವಿನಯ್ ಶೆಟ್ಟಿ, ಒರ್ವ ಪುತ್ರಿ ವಿದ್ಯಾ, ಸಹೋದರರು ಹಾಗೂ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.