ರೆಖ್ಯ: ಕೊಕ್ಕಡ ವಲಯದ ರೆಖ್ಯಾ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಭಜನಾ ಮಂದಿರದ ಅಧ್ಯಕ್ಷರಾದ ಗಿರಿಯಪ್ಪ ಬಂಗೇರರವರುಜನಜಾಗೃತಿ ಗ್ರಾಮ ಸಮಿತಿ ಸಭೆಯನ್ನು ದೀಪ ಉದ್ದೀಪನ ಮಾಡುವ ಮೂಲಕ ಉದ್ಘಾಟಿಸಿದರು.
ಗ್ರಾಮ ಸಮಿತಿ ಧ್ಯೇಯೋದ್ದೇಶ, ಅನಧಿಕೃತ ಮದ್ಯಮಾರಾಟ, ಕಾನೂನು ಬಾಹಿರ ಚಟುವಟಿಕೆ, ಗ್ರಾಮ ಸಮಿತಿ ಚಟುವಟಿಕೆ ಮತ್ತು ಯೋಜನೆಯ ಮತ್ತು ಜನಜಾಗೃತಿ ವೇದಿಕೆಯ ಕಾರ್ಯಕ್ರಮದ ಬಗ್ಗೆ ಜನಜಾಗೃತಿ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್ ಸವಿಸ್ತಾರವಾಗಿ ಮಾಹಿತಿ ನೀಡಿದರು. ರೆಖ್ಯಾ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ರಾಜು ವಿ.ಮಡೆಂಜಿಲ, ಉಪಾಧ್ಯಕ್ಷರಾಗಿ ಎಂ.ರವೀಂದ್ರ ಗೌಡ ಕೀಜನ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯ್ತು. ಗ್ರಾಮದ ಒಕ್ಕೂಟದ ಅಧ್ಯಕ್ಷರುಗಳು, ಊರಿನ ಗಣ್ಯರು, ನವಜೀವನ ಸದಸ್ಯರು, ಸೇವಾಪ್ರತಿನಿಧಿಗಳು ಹಾಜರಿದ್ದರು. ಸೇವಾಪ್ರತಿನಿಧಿ ಸಂದ್ಯಾ ಸ್ವಾಗತಿಸಿದರು, ಶಿಬಿರಾಧಿಕಾರಿ ನಾಗರಾಜ್ ವಂದಿಸಿದರು ಮೇಲ್ವಿಚಾರಕರಾದ ಮಮತಾ ಕಾರ್ಯಕ್ರಮ ನಿರ್ವಹಿಸಿದರು.