ವೇಣೂರು: ಅಂಗಡಿಯಲ್ಲಿ ಕೆಲಸಕ್ಕಿದ್ದ ವ್ಯಕ್ತಿಯೋರ್ವ ಮಾಲಕರ ಸ್ಕೂಟರ್ ಹಾಗೂ ಓಮ್ನಿ ವಾಹನಕ್ಕೆ ಬೆಂಕಿ ಹಚ್ಚಿದ ಬಗ್ಗೆ ಆ.24ರಂದು ವೇಣೂರು ಪೊಲೀಸರಿಗೆ ದೂರು ನೀಡಲಾಗಿದೆ.
ವೇಣೂರು ಪೇಟೆಯಲ್ಲಿ ಪಿಂಟೋ ಕೋಲ್ಡ್ ಸ್ಟೋರೆಜ್ ಎಂಬ ಮಾಂಸದ ಅಂಗಡಿಯನ್ನು ನಡೆಸುತ್ತಿರುವ ಶ್ರೀರಾಮ ನಗರ ವೇಣೂರಿನ ನಿವಾಸಿ ಪಾಸ್ಕಲ್ ಪಿಂಟೋ ಅವರು ತಮ್ಮ ಅಂಗಡಿಯಲ್ಲಿ ಕೆಲಸಕ್ಕಿದ್ದ ಪ್ರಭಾಕರ ಎಂಬವರ ವಿರುದ್ಧ ಈ ದೂರನ್ನು ನೀಡಿದ್ದಾರೆ.
ಪಾಸ್ಕಲ್ ಪಿಂಟೋ ಅವರು ವೇಣೂರಿನಲ್ಲಿ ಕೋಳಿ ಅಂಗಡಿಯನ್ನು ನಡೆಸುತ್ತಿದ್ದು, ಅವರ ಪತ್ನಿ ಕೂಡಾ ಹಗಲು ಹೊತ್ತಿನಲ್ಲಿ ಇದೇ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಇದ್ದಾರೆ. ಅವರು ತಮ್ಮ ಯಮಹಾ ಸ್ಕೂಟರ್ ಮತ್ತು ಓಮಿನಿ ವಾಹನವನ್ನು ತಮ್ಮ ಮನೆಯ ಸಮೀಪ ವಾಹನ ಶೆಡ್‌ನಲ್ಲಿ ನಿಲ್ಲಿಸಿದ್ದರು. ಆ.೨೪ ರಂದು ಸಂಜೆ ಅವರ ವಾಹನದ ಶೆಡ್‌ನಲ್ಲಿ ಬೆಂಕಿ ಉರಿಯುತ್ತಿರುದನ್ನು ಗಮನಿಸಿ ಅವರ ತಾಯಿ ಕರೆ ಮಾಡಿ ಕೂಡಲೇ ಬರುವಂತೆ
ತಿಳಿಸಿದ್ದರೆನ್ನಲಾಗಿದೆ. ತಕ್ಷಣ ಪಾಸ್ಕಲ್ ಪಿಂಟೋ ಅವರು ಮನೆಗೆ ಹೋಗಿ ನೋಡಿದಾಗ ಸ್ಕೂಟರ್ ಸಂಪೂರ್ಣ ಬೆಂಕಿಯಲ್ಲಿ ಸುಟ್ಟು ಹೋಗಿದ್ದು, ಅದರ ಪಕ್ಕದಲ್ಲಿದ್ದ ಓಮ್ಮಿ ಕೂಡಾ ಬೆಂಕಿಯಿಂದ ಭಾಗಶಃ ಸುಟ್ಟು ಹೋಗಿತ್ತು. ಕೂಡಲೇ ನೀರು ಹಾಕಿ ಬೆಂಕಿಯನ್ನು ನಂದಿಸಿದರು.
ಈ ಸಂದರ್ಭದಲ್ಲಿ ಅವರ ಅಂಗಡಿಯಲ್ಲಿ ಸುಮಾರು 6ತಿಂಗಳ ಮೊದಲು ಕೆಲಸಕ್ಕಿದ್ದ ಪ್ರಭಾಕರ ಎಂಬಾತ ಅಲ್ಲಿದ್ದು ನನ್ನ ಬಟ್ಟೆಯನ್ನು ಈ ಹಿಂದೆ ನೀವು ಸುಟ್ಟುದ್ದೀರಿ ಅದಕ್ಕಾಗಿ ನಾನೇ ನಿಮ್ಮ ವಾಹನ ಸುಟ್ಟಿರುತ್ತೇನೆ. ನೀವು ಮಾಡುವುದನ್ನು ಮಾಡಿ ಎಂದು ಹೇಳಿ ಹೋಗಿದ್ದಾನೆ ಎಂದು ಪಾಸ್ಕಲ್ ಪಿಂಟೋ ಅವರು ವೇಣೂರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಸುಟ್ಟು ಹೋದ ಸ್ಕೂಟರ್‌ನ ಮೌಲ್ಯ ರೂ.30ಸಾವಿರ ಮತ್ತು ಓಮಿನಿ ಕಾರಿನ ಮೌಲ್ಯ ರೂ.1.20 ಲಕ್ಷ ಆಗಿದ್ದು, ಒಟ್ಟು ರೂ. 1.20ಲಕ್ಷ ನಷ್ಟ ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.