ನಿಧನ ಸುದ್ದಿ

ವೇಣೂರು‌ ಗ್ರಾಮಪಂಚಾಯತ್ ಮಾಜಿ ಸದಸ್ಯರಾದ ಅಶೋಕ ದೇವಾಡಿಗ ಹೃದಯಾಘಾತದಿಂದ ನಿಧನ

ವೇಣೂರು: ವೇಣೂರು‌ ಗ್ರಾಮ ಪಂಚಾಯತ್,ಮಾಜಿ ಸದಸ್ಯರಾದ ಅಶೋಕ ದೇವಾಡಿಗ.ಕೆ.( 57ವ) ಅವರು ಹೃದಯಾಘಾತದಿಂದ  ಸ. 17 ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

‌‌ಇವರು ವೇಣೂರು ದೇವಾಡಿಗರ ಸೇವಾ ವೇದಿಕೆಯ ಜೊತೆ ಕಾರ್ಯದರ್ಶಿಯಾಗಿ, ವೇಣೂರು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಕಾಯ೯ದಶಿ೯ಯಾಗಿಯೂ ಕಾರ್ಯ ನಿರ್ವಹಿಸಿ, ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದರು.
ಮೃತರು, ತಾಯಿ, ತಂದೆ, ಸಹೋದರಿ, ಪತ್ನಿ ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ದವರನ್ನು ಅಗಲಿದ್ದಾರೆ.

ನಿಮ್ಮದೊಂದು ಉತ್ತರ