ರಾಜ್ಯ ವಾರ್ತೆ

ಉಜಿರೆ ಎಸ್.ಡಿ.ಎಂ ವಿದ್ಯಾರ್ಥಿನಿ ಮೇಘನಾ ಪೂಜಾರಿ ಉಪನಾಯಕಿಯಾಗಿರುವ ಭಾರತದ ನೆಟ್ ಬಾಲ್ ತಂಡಕ್ಕೆ ಏಷ್ಯನ್ ನೆಟ್ ಬಾಲ್ ಪಂದ್ಯಾಟದಲ್ಲಿ 8 ನೇ ಸ್ಥಾನ

ಸಿಂಗಾಪುರ: ಸಿಂಗಾಪುರದಲ್ಲಿ ಸೆ.3 ರಿಂದ 11 ರವರೆಗೆ ನಡೆದ ಅಂತರಾಷ್ಟ್ರೀಯ ಏಷ್ಯನ್ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಉಜಿರೆಯ ವಿದ್ಯಾರ್ಥಿನಿ ಮೇಘನಾ ಪೂಜಾರಿ ಉಪನಾಯಕಿಯಾಗಿರುವ ಭಾರತದ ತಂಡ 8 ನೇ ಸ್ಥಾನ ಪಡೆದಿದೆ.

ಭಾರತ ತಂಡ ಉಪನಾಯಕಿಯಾಗಿ ತಂಡವನ್ನು ಮುನ್ನಡೆಸಿ ದೇಶಕ್ಕೆ 8ನೇ ಸ್ಥಾನ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮೇಘನಾ ಪೂಜಾರಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥ ಕಾಲೇಜಿನ ಎಂ ಕಾಂ ಓದುತ್ತಿದ್ದಾರೆ.


ಅಂತರರಾಷ್ಟ್ರೀಯ ಏಷ್ಯನ್ ನೆಟ್‌ಬಾಲ್ ಕ್ರೀಡಾಕೂಟಕ್ಕೆ ಭಾರತೀಯ ತಂಡದ ಉಪನಾಯಕಿಯಾಗಿ ಬಿ.ಸಿ.ಮೇಘನಾ ಆಯ್ಕೆಯಾಗಿದ್ದರು.

ರಮೇಶ್ ಹೆಚ್, ಸುದೀನ ಪೂಜಾರಿ, ನಿತಿನ್ ಪೂಜಾರಿ,ಶಾರದಾ ಬಾರಕೂರು, ಮೇಘನಾ ಅವರ
ತರಬೇತುದಾರರಾಗಿದಾರೆ.
ಗೋಣಿಕೊಪ್ಪ ನಿವಾಸಿ ಬಿ.ಎ. ಚನ್ನಪ್ಪ ಪೂಜಾರಿ ಬಿ.ಸಿ.ನಳಿನಾಕ್ಷಿ ದಂಪತಿಯ ಪುತ್ರಿಯಾಗಿರುವ ಇವರು ಕರ್ನಾಟಕ ತಂಡದಿಂದ ತೆಲಂಗಾಣ, ತಮಿಳುನಾಡು, ಹರ್ಯಾಣ, ಹಿಮಾಚಲ ಪ್ರದೇಶ್, ಚತ್ತಿಸ್‌ಘಡ್‌ನಲ್ಲಿ ನಡೆದ ನೆಟ್‌ಬಾಲ್ ಪಂದ್ಯಾಟದಲ್ಲಿ ಭಾಗವಹಿಸಿ ಎರಡು ಕಂಚಿನ ಪದಕವನ್ನು ಪಡೆದುಕೊಂಡ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಿಮ್ಮದೊಂದು ಉತ್ತರ