ಅಳದಂಗಡಿ: ಮೂಡಿಗೆರೆಯಿಂದ ಕಾರ್ಕಳಕ್ಕೆ ಭತ್ತ ತುಂಬಿಕೊಂಡು ಬರುತ್ತಿದ್ದ ಕೆ.ಎ 18 ಸಿ3435 ಪಿಕಪೊಂದು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಬಳಿ ಜೂ.11ರಂದು ಪಲ್ಟಿಯಾಗಿರುವ ಘಟನೆ ನಡೆದಿದೆ.ಪಿಕಪ್ ನಲ್ಲಿ ಸುಮಾರು 28 ಕಿಂಟಲು ಭತ್ತ ಸಾಗಿಸುತ್ತಿದ್ದ ಸಂದರ್ಭದಲ್ಲಿ ವೀಲ್ ಜಾಮ್ ಗೊಂಡು ತಿರುವು ರಸ್ತೆಯಲ್ಲಿ ಪಲ್ಟಿಯಾಗಿದೆ.
ಪಲ್ಟಿಯಾದ ರಭಸಕ್ಕೆ ಗಾಡಿಯಲ್ಲಿದ್ದ ಭತ್ತ ರಸ್ತೆಗೆ ಚೆಲ್ಲಿದ್ದು ವೇಣೂರು ಆರಕ್ಷಕ ಠಾಣೆಯ ಸಿಬ್ಬಂದಿ ಮತ್ತು ಊರವರ ಸಹಕಾರದಿಂದ ಭತ್ತ ತೆರವುಗೊಳಿಸುವ ಕಾರ್ಯ ನಡೆದಿದೆ.