ಕ್ರೈಂ ವಾರ್ತೆ

ಉಜಿರೆ ಎರಡು ಅಂಗಡಿಗಳಲ್ಲಿ ಕಳ್ಳತನ ನಡೆಸಿದ ಒಬ್ಬಂಟಿ ಕಳ್ಳ

ಉಜಿರೆ: ಉಜಿರೆಯ ಎರಡು ಅಂಗಡಿಗಳಿಗೆ ನುಗ್ಗಿದ ಕಳ್ಳನೋರ್ವ ನಗದು ಸಹಿತ ಕೆಲ ಸೊತ್ತುಗಳನ್ನು ಕಳವು ಗೈದ ಘಟನೆ ಜ.೧೬ರಂದು ರಾತ್ರಿ ನಡೆದಿದೆ. ಕಳ್ಳನ ಕೃತ್ಯದ ದೃಶ್ಯ ಸಿಸಿ ಕ್ಯಾಮರದಲ್ಲಿ ಸಂಪೂರ್ಣ ಸೆರೆಯಾಗಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸರು ಅಂಗಡಿಗಳಿಗೆ ಬಂದು ಪರಿಶೀಲನೆ ನಡೆಸಿದ್ದಾರೆ.
ಉಜಿರೆ ಸರ್ಕಲ್ ಬಳಿ ಇರುವ ಸುರಕ್ಷಾ ಮೆಡಿಕಲ್ ಮತ್ತು ಪಕ್ಕದ ಶ್ರೀ ನಿಧಿ ಸ್ಟೋರ್‌ಗೆ ಜ.೧೬ ರಂದು ರಾತ್ರಿ ಕಳ್ಳನೋರ್ವ ಮೇಲ್ಚಾವಣಿಯ ಕಬ್ಬಿಣದ ಶೀಟ್ ಕಟ್ ಮಾಡಿ ನಂತರ ಜಾರಿಸಿ ಒಳನುಗಿದ್ದ, ಏನೂ ಸಿಗದಿದ್ದಾಗ ಬ್ರೆಷ್, ಸೋಪು, ಫರ್ಪ್ಯೂಮ್, ಫ್ರೀಜ್ ನಲ್ಲಿದ್ದ ರೆಡ್ ಬುಲ್ ಟೆನ್‌ನ್ನು ಪ್ಲಾಸ್ಟಿಕ್ ಚೀಲದೊಳಗೆ ಹಾಕಿಕೊಂಡು ಲ್ಯಾಪ್ ಟಾಪ್ ಹಿಡಿದುಕೊಂಡು ಬಂದ ದಾರಿಯಲ್ಲಿಯೇ ವಾಪಸ್ ಮೇಲೆ ಹತ್ತಿ ಹೋಗಿದ್ದಾನೆ.
ಸುರಕ್ಷಾ ಮೆಡಿಕಲ್ ನಿಂದ ಹೋಗುವಾಗ ಲ್ಯಾಪ್ ಟಾಪ್ ಹಿಡಿದುಕೊಂಡು ಹೋಗಿ ಹೊರಗಡೆ ನೆಲಕ್ಕೆ ಹೊಡೆದುಹಾಕಿ ಹಾನಿ ಮಾಡಿದ್ದು, ಲ್ಯಾಪ್ ಟಾಪ್ ಸಂಪೂರ್ಣ ಹೊಡೆದುಹೋಗಿದೆ. ಕಳೆದ ಕೆಲ ದಿನಗಳಿಂದ ಬೆಳ್ತಂಗಡಿ ಪರಿಸರದಲ್ಲೀ ಒಬ್ಬಂಟಿ ಕಳ್ಳ ಕೆಲ ಅಂಗಡಿಗಳಿಗೆ ನುಗ್ಗಿ ಕಳ್ಳತನ ನಡೆಸಿದ್ದ.

ನಿಮ್ಮದೊಂದು ಉತ್ತರ