ತಾಲೂಕು ಸುದ್ದಿ

ಬಿಜೆಪಿ ರೈತ ಸಮಾವೇಶ ಹಾಗೂ ಸಾಧಕ ರೈತರಿಗೆ ಸನ್ಮಾನ

ಬೆಳ್ತಂಗಡಿ : ನರೇಂದ್ರ ಮೋದಿ ಸರಕಾರ ಕೃಷಿಕರ ಜೀವನಕ್ಕೆ ಸರಕಾರಿ ವ್ಯವಸ್ಥೆಯಲ್ಲಿನ ಸವಲತ್ತುಗಳ ಮೂಲಕ ಶಕ್ತಿ ತುಂಬುವ ಕಾರ್ಯ ಮಾಡಿದ್ದಾರೆ. ಈ ಮೂಲಕ ತನ್ನ ಆಡಳಿತದ 8 ವರ್ಷಗಳಲ್ಲಿ ರೈತಾಪಿವರ್ಗದ ಆರ್ಥಿಕತೆ ಸುಧಾರಣೆಗೆ ನಾಂದಿ ಹಾಡಿದ್ದಾರೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಪ್ರಧಾನ ಮಂತ್ರಿ ಅವರ ೮ನೇ ವರ್ಷದ ಆಡಳಿತ ಸಂಭ್ರಮಾಚರಣೆ ಪ್ರಯುಕ್ತ ಬಿಜೆಪಿ ಬೆಳ್ತಂಗಡಿ ಮಂಡಲ ವತಿಯಿಂದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನದಲ್ಲಿ ಹಮ್ಮಿಕೊಂಡ ರೈತ ಸಮಾವೇಶ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರಿಗೆ ಸಮಾನ ಉದ್ಘಾಟಿಸಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ದೇಶದ ಎಲ್ಲ ಜನತೆಗೆ ಸರಕಾರದ ಯೋಜನೆ ತಲುಪು ವಂತೆ ಮೋದಿ ಮಾಡಿದ್ದಾರೆ. ಬೆಳ್ತಂಗಡಿ ತಾಲೂಕು 4 ವರ್ಷಗಳಲ್ಲಿ ಹಿಂದೆ ಎಂದೂ ಕಾಣದ ಅಭಿವೃದ್ಧಿ ಹೊಂದಿದೆ ಎಂದರು. ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ವಿ. ತೀರ್ಥರಾಮ, ಬಿಜೆಪಿ ರೈತ ಮೋರ್ಚಾಜಿಲ್ಲಾಧ್ಯಕ್ಷ ರಾಧಾಕೃಷ್ಣ
ಬೆಳ್ಳೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಅನ್ನಳಿಕೆ,ಬಿಜೆಪಿ ಜಿಲ್ಲಾಉಪಾಧ್ಯಕ್ಷ ಕೊರಗಪ್ಪ ನಾಯ್ಕ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್, ಲ್ಯಾಲ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಅಜಿತ್ ಕುಮಾರ್ ಆರಿಗ ಉಪಸ್ಥಿತರಿದ್ದರು.


ರೈತ ಮೋರ್ಚಾಪ್ರಧಾನಕಾರ್ಯದರ್ಶಿ ಕಾಂತಪ್ಪ ಗೌಡ ಪ್ರಸ್ತಾಪಿಸಿದರು. ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಜಯಂತ್ ಗೌಡ ಸ್ವಾಗತಿಸಿದರು. ರಾಜೇಶ್ ಪೆಂರ್ಬುಡ ಕಾರ್ಯಕ್ರಮ ನಿರೂಪಿಸಿದರು. ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆ.ವಿ. ಪ್ರಸಾದ್ ವಂದಿಸಿದರು.

ನಿಮ್ಮದೊಂದು ಉತ್ತರ