ಕಳಿಯ : ಇಲ್ಲಿಯ ಕಳಿಯ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷರಾದ ತುಕಾರಾಮ ಪೂಜಾರಿ ಯವರ ಮನೆಯ ಅಡಿಕೆ, ತೆಂಗಿನ ತೋಟದಲ್ಲಿ ಜೂ.9 ರಂದು ಸಂಜೆ ಸಮಯದಲ್ಲಿ ಬೃಹದಾಕಾರದ ಒಂಟಿ ಕಾಡುಕೋಣ ಪತ್ತೆಯಾಗಿದೆ.
ತೋಟದಲ್ಲಿರುವ ಹಲಸಿನ ಹಣ್ಣು ತಿನ್ನಲು ಬಂದಿದ್ದು, ಇದನ್ನು ಗಮನಿಸಿದ ತುಕಾರಾಮ ಪೂಜಾರಿ ಯವರು ತಮ್ಮ ಮೊಬೈಲ್ ಫೋನ್ ಮೂಲಕ ಸೆರೆ ಹಿಡಿದಿದ್ದಾರೆ.
ಕಳಿಯಬೀಡು,ಕಂಬದಡ್ಡ,ಬೆರ್ಕೆತ್ತೋಡಿ,ಅಂಗರ್ದೊಟ್ಟು,ಪದವು, ಹೀರ್ಯ,ಪರಪ್ಪು ಹಾಗೂ ಪೆಲತ್ತಳಿಕೆ ಪರಿಸರದಲ್ಲಿ ಓಡಾಡುತ್ತಿದ್ದು. ಸದ್ಯ ಕೃಷಿ-ತರಕಾರಿಗಳಿಗೆ ಹೆಚ್ಚಿನ ತೊಂದರೆ ಕೊಡುವುದಿಲ್ಲ ಎಂದು ಕೃಷಿಕರು ಹೇಳಿ ಕೊಳ್ಳುತ್ತಾರೆ .ಕೃಷಿಕರಿಗೆ ನಷ್ಟ ಸಂಭವಿಸಿದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಪರಿಹಾರ ನೀಡುವ ಮೂಲಕ ಕಾಡು ಕೋಣಕ್ಕೆ ಸಾರ್ವಜನಿಕರು ತೊಂದರೆ ನೀಡಿದಂತೆ ಸಂಬಂದ ಪಟ್ಟ ಇಲಾಖೆಯವರು ಎಚ್ಚರ ವಹಿಸಬೇಕು ಎಂದು ಸ್ಥಳೀಯರ ಒತ್ತಾಯವಾಗಿದೆ.