ಕ್ರೈಂ ವಾರ್ತೆ

ವಿಟ್ಲದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ನೇಣು ಬಿಗಿದು ಆತ್ಮಹತ್ಯೆ ಪ್ರಕರಣ: ಮಡಂತ್ಯಾರು ಅಲೆಕ್ಕಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಬೆಳ್ತಂಗಡಿ: ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಸಂಜೀವ ಎಂಬವರು ತನ್ನ ಅಪ್ರಾಪ್ತ ವಯಸ್ಸಿನ ಮಗಳು ತನ್ನ ಮನೆಯಲ್ಲಿ ನೇನು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಘಟಣೆಗೆ ಸಾಹುಲ್ ಹಮೀದ್@ಕುಟ್ಟ ಎಂಬಾತನು ವಿರುದ್ದ ಆತ್ಮಹತ್ಯೆಗೆ ದುಷ್ಪ್ರೇರಣೆ ನೀಡುವುದಾಗಿ ಆರೋಪಿಸಿ ವಿಟ್ಲ ಠಾಣೆಯಲ್ಲಿ ದೂರು ನೀಡಿದ್ದು, ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


‌  ‌‌‌‌ ಸದ್ರಿ ಪ್ರಕರಣದ ತನಿಖೆಯನ್ನು ಶಿವಾಂಶು ರಜಪೂತ ಸಹಾಯಕ ಪೊಲೀಸ್‌ ಅಧೀಕ್ಷಕರು ಬಂಟ್ವಾಳ ಉಪ ವಿಭಾಗ ಇವರ ನೇತೃತ್ವದಲ್ಲಿ ಕೈಗೊಂಡು ತಲೆಮರೆಸಿಕೊಂಡಿದ್ದ ಆರೋಪಿ ಕಣಿಯೂರು ತಲೆಕ್ಕಿ ನಿವಾಸಿ ಸಾಹುಲ್‌ ಹಮೀದ್‌ @ ಕುಟ್ಟ ಎಂಬಾತನ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿತ್ತು. ಆರೋಪಿ ಬೆ ಳ್ತಂಗಡಿ ತಾಲೂಕು ಮಡಂತ್ಯಾರು   ಸಮೀಪದ ಕುಕ್ಕಳ ಗ್ರಾಮದ ಅಳೆಕ್ಕಿ ಎಂಬಲ್ಲಿ  ಇರುವುದನ್ನು ಪತ್ತೆ ಹಚ್ಚಿದ‌ ಪೊಲೀಸರು ‌ಆರೋಪಿಯನ್ನು  ಮೇ 5‌ರಂದು ರಾತ್ರಿ.  ಬಂಧಿಸಿರುವುದಾಗಿ ವರದಿಯಾಗಿದೆ.

ಪ್ರಕರಣದ ತನಿಖೆ ಮುಂದುವರೆದಿದೆ.ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಋಷಿಕೇಶ್‌ ಭಗವಾನ ಸೋನಾವಣೆ ಮತ್ತು ಅಡಿಷನಲ್‌ ಎಸ್‌ಪಿ ಕುಮಾರ ಚಂದ್ರರವರ ಮಾರ್ಗದರ್ಶನ, ಬಂಟ್ವಾಳ ಉಪವಿಭಾಗದ ಎಎಸ್‌ಪಿ ಶಿವಾಂಶು ರಜಪೂತ ರವರ ನೇತೃತ್ವದಲ್ಲಿ ನಾಗರಾಜ್‌ ಹೆಚ್‌ .  ಪೊಲೀಸ್‌ ನಿರೀಕ್ಷಕರು ವಿಟ್ಲ ಠಾಣೆ ರವರ ಸಾರಥ್ಯದಲ್ಲಿ, ಸಂದೀಪಕುಮಾರ್‌ ಶೆಟ್ಟಿ ಪಿಎಸ್‌ಐ , ಮಂಜುನಾಥ ಟಿ. ಎಎಸ್‌ಐ ಸಿಬ್ಬಂದಿಗಳಾದ ಡ್ಯಾನಿ ಪ್ರಾನ್ಸಿಸ್‌ ತಾವ್ರೂ ,ಪ್ರಸನ್ನ,   ಸೀ ತಾರಾಮ, ಹೇಮರಾಜ,ಅಶೋಕ್‌,ಶ್ರೀಧರ ,ಕುಮಾರ ,ಹಾಗೂ ಜಿಲ್ಲಾ ಗಣಕಯಂತ್ರ ವಿಭಾಗದ ಸಂಪತ್‌ಕುಮಾರ್‌ ,ದಿವಾಕರರವರು ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

ನಿಮ್ಮದೊಂದು ಉತ್ತರ