ಓಡಿಲ್ನಾಳ: ಇಲ್ಲಿಯ ಕನೋ೯ಂತೊಡಿ ನಿವಾಸಿ ಮೋನಪ್ಪ ಗೌಡ (65) ರವರು ಸುಮಾರು ಮೂರು ವರ್ಷಗಳಿಂದ ಕಾಲಿನ ಗಂಟುನೋವಿನ ಖಾಯಿಲೆ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಜೀವನದಲ್ಲಿ ನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಅವರು ಹಳ್ಳಿ ಔಷಧಿಯನ್ನು ಹಾಗೂ ಹೃದಯ ಸಂಬಂಧಿ ಕಾಯಿಲೆಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯಿಂದ ಚಿಕಿತ್ಸೆಯನ್ನು ಪಡೆದುಕೊಂಡು ಪ್ರತಿದಿನ ಔಷಧಿಯನ್ನು ಸೇವಿಸುತ್ತಿದ್ದರು. ಮೇ. 5.ರಂದು ಬೆಳಿಗ್ಗೆ ತನಗಿರುವ ಗಂಟು ನೋವು ಹಾಗೂ ಹೃದಯ ಸಂಬಂಧಿ ಖಾಯಿಲೆಯಿಂದ ಮನನೊಂದು ಜಿಗುಪ್ಸೆಹೊಂದಿ ತಮ್ಮ ಮನೆಯ ಕೊಟ್ಟಿಗೆಯ ಒಳಗೆ ಅಡ್ಡಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರ ಪುತ್ರ ನೀಲಯ್ಯ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.