ಬೆಳ್ತಂಗಡಿ: ಚಾರ್ಮಾಡಿ ಘಾಟ್ ನ ಅಪಘಾತವಾಗಿದ್ದ ವಾಹನದಲ್ಲಿದ್ದ ಸವಾರರನ್ನು ಬೆದರಿಸಿ ಹಣ ಉಂಗುರ ಹಾಗೂ ಮೊಬೈಲನ್ನು ದರೋಡೆ ನಡೆಸಿರುವ ಘಟನೆ ಎ.5 ರಂದು ತಡರಾತ್ರಿ ನಡೆದಿದೆ.
ಈ ಬಗ್ಗೆ ಬೆಂಗಳೂರಿನ ದೇವನಹಳ್ಳಿಯ ಮಧುಸೂದನ್ ಎಂಬುವರು ಬಣಕಲ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆ ವಿವರ:
ಮೇ 3 ರಂದು ದೇವನ ಹಳ್ಳಿಯಿಂದ ಚಾರ್ಮಾಡಿ ಘಾಟಿ ರಸ್ತೆ ಮಾರ್ಗವಾಗಿ ಕಾರಿನಲ್ಲಿ ಬರುವಾಗ
ಚಾರ್ಮಾಡಿ ಘಾಟಿಯಲ್ಲಿ ರಾತ್ರಿ 12.30 ರ ಸಮಯಕ್ಕೆ ಕಾರು ರಸ್ತೆಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಂಬುಲೆನ್ಸ್ ಗೆ ಕರೆ ಮಾಡಲು ನೆಟ್ವರ್ಕ್ ಇಲ್ಲದೆ ಇದ್ದುದರಿಂದ ಕಾರಿನಲ್ಲಿ ಕುಳಿತ್ತಿದ್ದರು.
ಸಂದರ್ಭದಲ್ಲಿ ಮಂಗಳೂರು ಕಡೆಯಿಂದ ಮೂಡಿಗೆರೆ ಕಡೆಗೆ ಬೈಕ್ ಮತ್ತು ಸ್ಕೂಟರ್ ನಲ್ಲಿ ಬಂದ ಮೂವರು ಯುವಕರ ತಂಡ ಕಾರನ್ನು ಸುತ್ತುವರಿದು ಮೊಬೈಲ್, ಪರ್ಸ್, ಹಾಗೂ ಉಂಗುರವನ್ನು ಕಸಿದುಕೊಂಡು ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ಬಣಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ