ಕ್ರೈಂ ವಾರ್ತೆ

ಹಾಡು ಹಗಲೇ ಮನೆಯಿಂದ ರೂ.55 ಸಾವಿರ ಮೌಲ್ಯದ ಚಿನ್ನಾಭರಣ ಕಳವು

ನಡ: ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಹಂಚನ್ನು ತೆಗೆದು ಒಳ ನುಗ್ಗಿದ ಕಳ್ಳರು ಗೋದ್ರೆಜ್ ನಲ್ಲಿದ್ದ ರೂ.55 ಸಾವಿರ ಮೌಲ್ಯದ ಚಿನ್ನಾಭರಣ ಕಳವು ಗೈದ ಘಟನೆ ಎ.8ರಂದು ನಡ ಗ್ರಾಮದ ಕುತ್ರೋಟ್ಟು ಎಂಬಲ್ಲಿ ನಡೆದಿದ್ದು, ಎ.11ರಂದು ಈ ಬಗ್ಗೆ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದೆ

ನಡ ಗ್ರಾಮದ ಕುತ್ರೋಟ್ಟು ಮನೆ, ತಿಮ್ಮಪ್ಪ ಪೂಜಾರಿ ಹಾಗೂ ಅವರ ಮಕ್ಕಳು ಎ. 8 ರಂದು ಕೆಲಸಕ್ಕೆ ಹೋದ ಬಳಿಕ ಅವರ ಪತ್ನಿ ಬೆಳಿಗ್ಗೆ 10-30ಕ್ಕೆ ಮನೆಗೆ ಬೀಗ ಹಾಕಿ ಅಗತ್ಯ ಕೆಲಸಕ್ಕೆ ಬೆಳ್ತಂಗಡಿ ಪೇಟೆಗೆ ಹೋಗಿದ್ದರು. ಮದ್ಯಾಹ್ನ 1-30ಕ್ಕೆ ಮನೆಗೆ ಬಂದು ಎದುರಿನ ಬೀಗ ತೆಗೆಯಲು ಹೋದಾಗ ಬಾಗಿಲು ಮುಂದಕ್ಕೆ ಹೋಗದೆ ಮನೆಯ ಒಳಗಿನಿಂದ ಚಿಲಕ ಹಾಕಿದ್ದು, ಕಂಡು ಬಂದಿತ್ತು.ಕೂಡಲೇ ನೆರೆಕೆರೆಯವರ ಸಹಾಯದಿಂದ ಒಳಗೆ ಹೋಗಿ ನೋಡಿದಾಗ ಮನೆಯ ಒಳಗೆ ಯಾರೂ ಇರಲಿಲ್ಲ. ಆದರೆ ಮನೆಯ ಮೇಲ್ಚಾವಣಿಯ ಹಂಚು ತೆಗೆದಿರುವುದು ಕಂಡುಬಂದಿದ್ದು, ಬಳಿಕ ಕೊಣೆಯೊಳಗೆ ಹೋಗಿ ನೋಡಿದಾಗ, ಗಾಡ್ರೇಜ್ ನಲ್ಲಿ ಇಟ್ಟಿದ್ದ ಸುಮಾರು 17.240 ಗ್ರಾಂ ತೂಕದ ಚಿನ್ನಾಭರಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿತ್ತು.
ಕಳವಾದ ಚಿನ್ನಾಭರಣದ ಅಂದಾಜು ಮೌಲ್ಯ ರೂ. 55 ಸಾವಿರ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮದೊಂದು ಉತ್ತರ