ತಾಲೂಕು ಸುದ್ದಿ

ಎಸ್ಸೆಲ್ಸಿ ಪರೀಕ್ಷೆ ಬರೆಯಲು ಬರುತ್ತಿದ್ದ ವಿದ್ಯಾರ್ಥಿನಿ ತನ್ವಿ ತಲೆ ತಿರುಗಿ ಸ್ಕೂಟರ್ ನಿಂದ ಬಿದ್ದು ಗಾಯ – ತಕ್ಷಣ ಸ್ಪಂದಿಸಿದ ಶಾಲಾ ಆಡಳಿತ ಮಂಡಳಿ- ಬದಲಿ ವಿದ್ಯಾರ್ಥಿ ಸಹಾಯದಿಂದ ಪರೀಕ್ಷೆ ಬರೆದ ವಿದ್ಯಾರ್ಥಿನಿ

ಬೆಳ್ತಂಗಡಿ: ಲಾಯಿಲ ಸೈಂಟ್ ಮೇರಿಸ್ ಆಂಗ್ಲಮಾಧ್ಯಮ ಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ , ಕೊನೆಯ ವಿಜ್ಞಾನ ಪರೀಕ್ಷೆ ಬರೆಯಲು ವಾಣಿ ಕಾಲೇಜಿಗೆ ತಾಯಿ ಜೊತೆ ಸ್ಕೂಟರ್ ನಲ್ಲಿ ಬರುತ್ತಿರುವಾಗ ವಿದ್ಯಾರ್ಥಿನಿ ಲಾಯಿಲದ ಪುತ್ರಬೈಲು ಅಂಗನವಾಡಿ ಎದುರು ತಲೆ ತಿರುಗಿ ಬಿದ್ದು ಗಾಯಗೊಂಡ ಹಾಗೂ ವಿದ್ಯಾರ್ಥಿನಿ ಬದಲಿ ವಿದ್ಯಾರ್ಥಿ ಸಹಾಯದಿಂದ ಪರೀಕ್ಷೆ ಬರೆದ ಘಟನೆ ಎ.11ರಂದು ನಡೆದಿದೆ.


ನಾವೂರು ಗ್ರಾಮದ ಸಂಪಿಂಜಾ ನಿವಾಸಿ ಲಕ್ಷ್ಮಣ-ಮಮತಾ ದಂಪತಿಯ ಪುತ್ರಿ ತನ್ವಿ(15) ಗಾಯಗೊಂಡರೂ ಧೃತಿಗೆಡದೆ ಪರೀಕ್ಷೆ ಬರೆದ ವಿದ್ಯಾರ್ಥಿನಿ.
ಸ್ಕೂಟರ್ ನಿಂದ ವಿದ್ಯಾರ್ಥಿನಿ ಬಿದ್ದರೂ,
ಈ ವೇಳೆ ತಾಯಿ ಮಮತಾಗೆ ಯಾವುದೇ ಗಾಯವಾಗಿಲ್ಲ ವಿದ್ಯಾರ್ಥಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ತಕ್ಷಣ ಬೆನಕ ಆಸ್ಪತ್ರೆಗೆ ದಾಖಲಿಸಿ ವೈದ್ಯರು ಚಿಕಿತ್ಸೆ ನೀಡಿದ್ದಾರೆ.
ಬಳಿಕ  ಶಾಲಾ ಆಡಳಿತ ಮಂಡಳಿಗೆ ತಾಯಿ ಮಾಹಿತಿಯನ್ನು ತಿಳಿಸಿದರು. ತಕ್ಷಣ ಸ್ಪಂದಿಸಿದ ಆಡಳಿತ ಮಂಡಳಿ ಆಸ್ಪತ್ರೆಗೆ ಬಂದು ವಿಚಾರಿಸಿ ನಂತರ ಪರೀಕ್ಷೆ ಬರೆಯಲು ಸಾಧ್ಯವಾಗದೇ ಇರುವುದರಿಂದ ಅದೇ ಶಾಲೆಯ ವಿದ್ಯಾರ್ಥಿನಿಯೊಬ್ಬಳ ದಾಖಲೆಗಳನ್ನು ನೀಡಿ ಆಕೆ ಹೇಳಿದಾಗೆ ಪರೀಕ್ಷೆ ಬರೆಯಲು ಅವಕಾಶ ನೀಡಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ವಾಣಿ ಕಾಲೇಜಿನ ಪರೀಕ್ಷಾ ಮೇಲ್ವಿಚಾರಕರಿಗೆ ಮನವಿ ಮಾಡಿದರು.
ಕೂಡಲೇ ಪರೀಕ್ಷೆ ಮೇಲ್ವಿಚಾರಕರು11:45 ರಿಂದ 2:45ರವರೆಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಕೊಟ್ಟರು.
ಉಜಿರೆ ಬೆನಕ ಆಸ್ಪತ್ರೆಯ ಮುಖ್ಯಸ್ಥರು ತಮ್ಮ ಆಸ್ಪತ್ರೆಯ ಆಂಬುಲೆನ್ಸ್ ನೀಡಿ ಅದರ ಮೂಲಕ ವಿದ್ಯಾರ್ಥಿನಿಯನ್ನು ಪರೀಕ್ಷೆ ಬರೆಯಲು ಕಳುಹಿಸಲಾಯಿತು. ಸೈಂಟ್ ಮೇರಿಸ್ ಆಂಗ್ಲಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯ ಮೂಲಕ ತನ್ವಿ ಸ್ಟಚ್ಚರ್ ನಲ್ಲಿಯೇ ಪರೀಕ್ಷಾ ಕೊಠಡಿಯಲ್ಲಿ ಮಲಗಿಕೊಂಡು ಆಕೆ ಹೇಳಿದ ಹಾಗೆ ಪಕ್ಕದಲ್ಲಿ ಕುಳಿತು ಪರೀಕ್ಷೆ ಬರೆದು ಮುಗಿಸಿದ್ದು ನಂತರ ಅದೇ ಆಂಬುಲೆನ್ಸಲ್ಲಿ ಚಿಕಿತ್ಸೆಗಾಗಿ ಬೆನಕ ಆಸ್ಪತ್ರೆಗೆ ಕರೆತರಲಾಗಿದ್ದು ತನ್ವಿ ಇದೀಗ ಚಿಕಿತ್ಸೆ ಪಡೆಯುತ್ತಿದ್ದಾಳೆ.

ನಿಮ್ಮದೊಂದು ಉತ್ತರ