ಕ್ರೈಂ ವಾರ್ತೆ

ಮುಂಡಾಜೆಯಲ್ಲಿ ತಾಯಿ-ಮಗುವಿನೊಂದಿಗೆ ನಾಪತ್ತೆ: ಪೊಲೀಸ್ ದೂರು

ಬೆಳ್ತಂಗಡಿ : ಮುಂಡಾಜೆ ಗ್ರಾಮ ನಿವಾಸಿ ಮಹಿಳಾರ್ಯೋವರು ತನ್ನ 3 ವರ್ಷದ ಮಗುವಿನೊಂದಿಗೆ ನಾಪತ್ತೆಯಾದ ಘಟನೆ ಜು.4 ರಂದು ನಡೆದಿದೆ.ಮುಂಡಾಜೆ ಗ್ರಾಮದ ಅಗರಿ ನಿವಾಸಿ ತೋಮಸ್ ಪಿ. ಡಿ ರವರ ಪತ್ನಿ ನೀನು ಒ.ಎಸ್ (24ವ) ರವರು ತಮ್ಮ ಮೂರು ವರ್ಷದ ಪುತ್ರಿ ಇವನಾ ಮರಿಯಾ ತೋಮಸ್(3ವ) ರೊಂದಿಗೆ ರಾತ್ರಿ 10 ಗಂಟೆಯ ಸಮಯ ತನ್ನ ಪತಿಸ್ನಾನಮಾಡುತ್ತಿರುವಸಂದರ್ಭದಲ್ಲಿಯಾರಿಗೂ ವಿಚಾರ ತಿಳಿಸದೆ ಕಾಣೆಯಾಗಿದ್ದಾರೆ

ಈ ವಿಚಾರವಾಗಿ ಆಕೆಯ ಪತಿ ಸಂಬಂಧಿ
ಕರಲ್ಲಿ, ಊರಿನವರಲ್ಲಿ ವಿಚಾರ ತಿಳಿಸಿ ಹುಡುಕಾ
ಟ ನಡೆಸಿದ್ದು ಇದುವರೆಗೂ ಆಕೆ ಮನೆಗೆ ಮರಳಿ ಬಾರದೆ ನಾಪತ್ತೆಯಾಗಿರುತ್ತಾರೆ ಎಂದು ಆಕೆಯ ಪತಿ ತೋಮಸ್ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.ಈ ಸಂಬಂಧ ಧರ್ಮಸ್ಥ
ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ
ದ್ದು ಪೊಲೀಸ್‌ರು ತನಿಖೆ ಮುಂದುವರಿಸಿದ್ದಾರೆ.

ನಿಮ್ಮದೊಂದು ಉತ್ತರ