ತಾಲೂಕು ಸುದ್ದಿ

ಬಂಟ್ವಾಳದಲ್ಲಿ ಭೀಕರ ಅಪಘಾತದಲ್ಲಿ ಮೃತಪಟ್ಟ ಮಡಂತ್ಯಾರು ಕೀರ್ತಿ ಕ್ಯಾಟರಿಂಗ್ ಮಾಲಕ ರೋಶನ್ ಸೆರಾ ಅವರ ಕಳವಾಗಿದ್ದ ‌2.30 ಲಕ್ಷ ರೂ ನಗದು ಹಾಗೂ ದಾಖಲೆ ಪತ್ರಗಳು ಕಾರಿನಲ್ಲೇ ಪತ್ತೆಯಾಗಿದೆ.

ಬೆಳ್ತಂಗಡಿ: ಬಂಟ್ವಾಳದಲ್ಲಿ ಭೀಕರ ಅಪಘಾತದಲ್ಲಿ ಮೃತಪಟ್ಟ ಮಡಂತ್ಯಾರು ಕೀರ್ತಿ ಕ್ಯಾಟರಿಂಗ್ ಮಾಲಕ ರೋಶನ್ ಸೆರಾ ಅವರ ಕಳವಾಗಿದ್ದ ‌2.30 ಲಕ್ಷ ರೂ ನಗದು ಹಾಗೂ ದಾಖಲೆ ಪತ್ರಗಳು ಕಾರಿನಲ್ಲೇ ಪತ್ತೆಯಾಗಿದೆ.

ಕಾರಿನಲ್ಲೇ ಪತ್ತೆಯಾಗಿರುವುದರಿಂದ ಮನೆಯವರಿಗೆ ನಗದನ್ನು ಸುರಕ್ಷಿತವಾಗಿ ಹಸ್ತಾಂತರಿಸಲಾಗಿದೆ.
ಕ್ಯಾಟರಿಂಗ್ ಉದ್ಯೋಗ ನಡೆಸುತ್ತಿದ್ದ ರೊಶನ್ ಸೆರಾವೋ ಹಿಂದಿನ ದಿನ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದ ಹಣವನ್ನು ಪಡೆದು ಮನೆಗೆ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು ಬಳಿಕ ಮನೆಯವರು ಪರಿಶೀಲನೆ ನಡೆಸಿದಾಗ ಹಣ ಹಾಗೂ ದಾಖಲೆ ಪತ್ರಗಳು ಸಿಕ್ಕಿರಲಿಲ್ಲ ಹೀಗಾಗಿ ಬಂಟ್ವಾಳ ನಗರ ಠಾಣೆಗೆ ಈ ಕುರಿತು ದೂರು ನೀಡಿದ್ದರು.

ನಿಮ್ಮದೊಂದು ಉತ್ತರ