ಜಿಲ್ಲಾ ವಾರ್ತೆತಾಲೂಕು ಸುದ್ದಿರಾಜ್ಯ ವಾರ್ತೆ

ಗೃಹ.ರಕ್ಷಕ ದಳದ ಸಿಬ್ಬಂದಿಗಳ ಕತ೯ವ್ಯ ಭತ್ತೆ ರೂ.750ಕ್ಕೆ ಏರಿಸಿ ವಿಶೇಷ ಪ್ಯಾಕೇಜ್ ಘೋಷಣೆಗೆ ಶಾಸಕರಿಂದ ಮುಖ್ಯ ಮಂತ್ರಿಗಳಿಗೆ ಮನವಿ

ಬೆಳ್ತಂಗಡಿ: ಗೃಹ ರಕ್ಷಕ ದಳದ ಸಿಬ್ಬಂದಿಗಳು ಕೋವಿಡ್ -19 ಎರಡನೇ ಅಲೆಯ ನಿಯಂತ್ರಣಕ್ಕಾಗಿ ವಿವಿಧ ರೀತಿಯಲ್ಲಿ ಶ್ರಮಿಸುತ್ತಿದ್ದು ಗೃಹ ರಕ್ಷಕ ದಳದ ಸಿಬ್ಬಂದಿಗಳ ಕರ್ತವ್ಯ ಭತ್ಯೆಯಾಗಿ ಕೇವಲ ರೂ.380 ಪಡೆಯುತ್ತಿದ್ದು ಲಾಕ್ಡೌನ್ ಕಾರಣದಿಂದಾಗಿ ಕರ್ತವ್ಯ ನಿರತ ಸಿಬ್ಬಂದಿಗಳು ಸಂಕಷ್ಟದಲ್ಲಿದ್ದು,ಆದ್ದರಿಂದ ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೆ ನೀಡುತ್ತಿರುವ ಕರ್ತವ್ಯ ಭತ್ಯೆ ರೂ.380 ರಿಂದ 750ಕ್ಕೆ ಹೆಚ್ಚಿಸಿ ವಿಶೇಷ ಪ್ಯಾಕೇಜ್ ಘೋಷಿಸಬೇಕಾಗಿ ರಾಜ್ಯದ ಮು   ಖ್ಯಮಂತ್ರಿಗಳಾದ  ಬಿ ಎಸ್ ಯಡ್ಡಿಯೂರಪ್ಪ ನವರಿಗೆ ಜೂ.9 ರಂದು ಶಾಸಕ  ಹರೀಶ್ ಪೂಂಜ ಮನವಿ    ಸಲ್ಲಿಸಿದರು.

ನಿಮ್ಮದೊಂದು ಉತ್ತರ