ಗ್ರಾಮಾಂತರ ಸುದ್ದಿ

ತೆಕ್ಕಾರು ಕೃಷಿ ಪತ್ತಿನ ಸಹಕಾರಿ ಸಂಘ ಕಾವಲುಗಾರ ಇಬ್ರಾಹಿಂರಿಗೆ ಬೀಳ್ಕೋಡುಗೆ

ತೆಕ್ಕಾರು: ಇಲ್ಲಿಯ ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸು ಧೀರ್ಘ 39 ವರ್ಷಕಾಲ ಕಾವಲುಗಾರನಾಗಿ ಪ್ರಾಮಾಣಿಕವಾಗಿ ಸೇವೆಗೈದ ಇಬ್ರಾಹಿಂ ಬೊಮ್ಮಕೋಡಿ ಇವರಿಗೆ ಬೀಳ್ಕೊಡುಗೆ ಸಮಾರಂಭ ಜೂ.5 ರಂದು ಜರುಗಿತು.


ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ. ಅಬ್ದುಲ್ ರಝಾಕ್‌ರವರು ವಹಿಸಿದ್ದರು. ಸಂಘದ ಉಪಾಧ್ಯಕ್ಷರಾದ ನಾಭಿರಾಜ್ ಹೆಗ್ಡೆ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಅಡಪ ಹಾಗೂ ನಿರ್ದೇಶಕರಾದ ಶೇಖರ ಪೂಜಾರಿ, ಹುಸೈನ್ ಬಾಗ್ಲೋಡಿ, ವೃತ್ತಿಪರ ನಿರ್ದೇಶಕರಾದ ಇನಾಸ್ ರೊಡ್ರಿಗಸ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಅದೇ ದಿನ ತೆಕ್ಕಾರು ಗ್ರಾಮದ ಕೊರೋನಾ ಪಾಸಿಟಿವ್ ಕುಟುಂಬಗಳಿಗೆ ಹಾಗೂ ವಿಕಲಚೇತನರಿಗೆ ಆಹಾರ ಕಿಟ್ ನೀಡಲಾಯಿತು.

ನಿಮ್ಮದೊಂದು ಉತ್ತರ