ರಾಜ್ಯ ವಾರ್ತೆ

ಬೆಳ್ತಂಗಡಿಯಿಂದ ಕಾಶ್ಮೀರಕ್ಕೆ ಸೈಕ್ಲಿಂಗ್ ಯಾತ್ರೆ

ರಾಷ್ಟ್ರದ ಯುವ ಜನತೆಗೆ ಪರಿಸರ ಸಂರಕ್ಷಣೆ ಹಾಗೂ ಆರೋಗ್ಯ ಅವಶ್ಯಕತೆ ಮತ್ತು ಅಂಗಾಂಗ ದಾನದ ಮಹತ್ವಗಳ ಬಗ್ಗೆ ಅರಿವು ಮೂಡಿಸುವ ಸಂದೇಶದೊಂದಿಗೆ ಮಂಗಳೂರಿನಿಂದ ಕಾಶ್ಮೀರದವರೆಗೆ ನಡೆಯಲಿರುವ ಸೈಕ್ಲಿಂಗ್ ಯಾತ್ರೆಯಲ್ಲಿ ಪಾಲ್ಗೊಳ್ಳಲಿರುವ ಬೆಳ್ತಂಗಡಿಯ ಶ್ರೀನಿಧಿ ಶೆಟ್ಟಿ ಹಾಗೂ ಜಗದೀಶ ಇವರನ್ನು ಬೆಳ್ತಂಗಡಿಯ ಕುತ್ಯಾರು ದೇವಸ್ಥಾನದಿಂದ ಶನಿವಾರ ಕಳುಹಿಸಿಕೊಡಲಾಯಿತು.

ಇವರ ಈ ಸೈಕ್ಲಿಂಗ್ ಯಾತ್ರೆಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯ ಘಟಕದ ನಿರ್ದೇಶಕ ಕಾಂಚೋಡು ಗೋಪಾಲಕೃಷ್ಣ ಭಟ್ ಚಾಲನೆ ನೀಡಿ ಭಾರತದ ಯುವ ಜನತೆಗೆ ಆರೋಗ್ಯ ಭಾಗ್ಯ ಮುಖ್ಯವಾಗಿದ್ದು ದೇಶ ಸೇವೆಯಲ್ಲಿ ಯಾವ ರೀತಿ ತೊಡಗಿಸಿಕೊಳ್ಳಬೇಕೆಂಬ ಸಂದೇಶ ಹೊತ್ತಿರುವ ಈ ಸೈಕ್ಲಿಂಗ್ ಯಾತ್ರೆ ಮಾದರಿಯಾಗಲಿ ಎಂದು ಹೇಳಿದರು.
ಎಂಎಲ್ ಸಿ ಪ್ರತಾಪ ಸಿಂಹ ನಾಯಕ್ ಶುಭ ಹಾರೈಸಿದರು. ರೋಟರಿ ಕ್ಲಬ್ ಬೆಳ್ತಂಗಡಿ ಪರವಾಗಿ ಅಧ್ಯಕ್ಷೆ ಮನೋರಮ ಭಟ್ ಮತ್ತು ಬೆಳ್ತಂಗಡಿ ತಾಲೂಕು ಮೂಲ್ಯರ  ಯಾನೆ ಕುಂಬಾರರ ಸಂಘದ  ಅಧ್ಯಕ್ಷ  ಹರೀಶ್ ‌‌‌‌‌‌‌‌‌‌‌‌‌‌‌‌‌‌‌‌‌‌‌ಕಾರಿಂಜ ಹಾಗೂ    ಸದಸ್ಯರು ಧನ ಸಹಕಾರ ನೀಡಿದರು.

ಒಟ್ಟು 3,500 ಕಿ.ಮೀ. ನಡೆಯಲಿರುವ ಈ ಸೈಕ್ಲಿಂಗ್ ಯಾತ್ರೆ 10 ರಾಜ್ಯಗಳ ಮೂಲಕ ಕ್ರಮಿಸಿ ಅ.25 ರಂದು ಕಾಶ್ಮೀರವನ್ನು ತಲುಪಲಿದೆ.ದಾರಿಯುದ್ದಕ್ಕು ಅಲ್ಲಲ್ಲಿ ಇರುವ
ಸೈನ್ಯದ ಶಿಬಿರಗಳಲ್ಲಿ ಸೈಕಲ್ ಯಾತ್ರಿಗಳಿಗೆ ಬೇಕಾದ ಅಗತ್ಯ ನೆರವು ನೀಡಲಾಗುತ್ತದೆ. ಜಲಂಧರ್ ನಲ್ಲಿರುವ ಉಜಿರೆಯ ಲೆ.ಕ.ನರಸಿಂಹ ಪ್ರಭು ಮೂರ್ಜೆ ಈ ಯಾತ್ರಿಗಳನ್ನು ಗೌರವಿಸಲಿದ್ದಾರೆ.
ಅ. 30ರಂದು ಕಾಶ್ಮೀರದ ಲಾಲ್ ಚೌಕ್ ಮತ್ತು ಕಾರ್ಗಿಲ್ ಪ್ರದೇಶದಲ್ಲಿ ಈ ಯಾತ್ರೆ ಸಂಪನ್ನಗೊಳ್ಳಲಿದೆ.

ನಿಮ್ಮದೊಂದು ಉತ್ತರ