ಜಿಲ್ಲಾ ವಾರ್ತೆತಾಲೂಕು ಸುದ್ದಿರಾಜ್ಯ ವಾರ್ತೆ

ಶಾಸಕ ಪೂಂಜರ ಕಚೇರಿ ಶ್ರಮಿಕಕ್ಕೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭೇಟಿ


ಬೆಳ್ತಂಗಡಿ: ಮಹರಾಷ್ಟ್ರದ ಚುರುಕಿನ ರಾಜಕೀಯ ಮುಖಂಡ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರ ಕಚೇರಿಗೆ ಭೇಟಿಯಾದ್ರು. ಚಿಕ್ಕಮಗಳೂರು ತೆರಳುವ ದಾರಿ ಮಧ್ಯೆ ಶಾಸಕರ ಕಚೇರಿಯಲ್ಲಿ ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಬಿಜೆಪಿ ಹಲವಾರು ಮುಖಂಡರು, ಕಾರ್ಯಕರ್ತರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ರು.

ಈ ವೇಳೆ ಶಾಸಕ ಹರೀಶ್ ಪೂಂಜ ದೇವೇಂದ್ರ ಫಡ್ನವಿಸ್ ಗೆ ಶಾಲು ಹೊದಿಸಿ ಸನ್ಮಾನಿಸಿದ್ರು. ಪ್ರತಾಪ ಸಿಂಹ ನಾಯಕ್ ಹಾರ ಹಾಕಿ ಗೌರವಿಸಿದ್ರೆ, ಜಯಂತ್ ಕೋಟ್ಯಾನ್ ಪೇಟ ತೋಡಿಸಿ ಅಭಿನಂದಿಸಿದ್ರು. ಅಪಾರ ಕಾರ್ಯಕರ್ತರ ಸಮ್ಮುಖದಲ್ಲಿ ಗೌರವ ಸ್ವೀಕರಿಸಿದ ದೇವೇಂದ್ರ ಫಡ್ನವಿಸ್ ಎಲ್ಲರಿಗೂ ಧನ್ಯವಾದ ತಿಳಿಸಿ, ಶಾಸಕರಿಗೆ ಶುಭ ಹಾರೈಸಿ ಚಿಕ್ಕಮಗಳೂರಿನತ್ತ ಪ್ರಯಾಣ ಬೆಳೆಸಿದ್ರು.ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಗಣೇಶ ಗೌಡ, ಶ್ರೀನಿವಾಸ ರಾವ್, ಸೀತಾರಾಮ ಬೆಳಾಲು, ನ.ಪಂ ಅಧ್ಯಕ್ಷೆ ರಜನಿ ಕುಡ್ವ, ಜಯಂತ ಗೌಡ ಸೇರಿದಂತೆ ಕಾಯ೯ಕತ೯ರು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ