ವೈದ್ಯರಿಗೆ ಅಚ್ಚರಿ ಆಗುವ ಘಟನೆಯೊಂದು ನಡೆದಿದೆ. ಎಮ್ಮೆಯೊಂದು ಅವಳಿ ಕರುಗಳಿಗೆ ಜನ್ಮ ನೀಡಿದೆ. ಅದೇನು ವಿಶೇಷ, ಅವಳಿ ಕರುಗಳಿಗೆ ಜನ್ಮ ನೀಡೋದ್ರಲ್ಲಿ? ಎಂದು ಯೋಚಿಸುತ್ತಿದ್ದಾರಾ? ಅಲ್ಲೇ ಇರೋದು ವಿಶೇಷ, ಈ ಬಗೆಗಿನ ಇಂಟ್ರೆಸ್ಟಿಂಗ್ ಸುದ್ದಿ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ನಾಡ ಕಳಿಸ ಎಂಬ ಗ್ರಾಮದಲ್ಲಿ ಎಮ್ಮೆಯನ್ನು ಮೇಯಲೆಂದು ಹೊರಗಡೆ ಕಟ್ಟಿ ಹಾಕಲಾಗಿತ್ತು. ಇಲ್ಲಿನ ದುರ್ಗಪ್ಪ ಅವರ ಎಮ್ಮೆ ಸೆಪ್ಟೆಂಬರ್ 13 ರಂದು ಮೊದಲ ಪ್ರಸವದಲ್ಲಿ ಗಂಡು ಕರುವಿಗೆ ಜನ್ಮ ನೀಡಿತ್ತು. ಅಷ್ಟೇ ಆಗಿದ್ರೆ ಈ ಎಮ್ಮೆ ಹೀಗೆ ಸುದ್ದಿನೇ ಆಗ್ತಿರಲಿಲ್ಲ. ಆದ್ರೆ ಚೆನ್ನಾಗಿ ಮೇಯ್ಕೊಂಡು ಆರೋಗ್ಯವಾಗಿದ್ದ ಎಮ್ಮೆಯನ್ನು ಒಂದು ವಾರದ ಬಳಿಕ ಹುಲ್ಲು ಮೇಯಲೆಂದು ಹೊರಗೆ ಕಟ್ಟಿ ಹಾಕಿದ್ರು. ಅಲ್ಲೇ ಎಮ್ಮೆಗೆ ಹಠಾತ್ ಪ್ರಸವ ವೇದನೆ
ಕಾಣಿಸಿಕೊಂಡು ಇನ್ನೊಂದು ಹೆಣ್ಣು ಕರುವಿಗೆ ಜನ್ಮ ನೀಡಿದೆ. ಅದೂ ಒಂದು ವಾರದ ನಂತರ.
ಸಾಮಾನ್ಯವಾಗಿ ಎಮ್ಮೆ ದನಗಳು ಅವಳಿ ಜವಳಿಗೆ ಜನ್ಮ ನೀಡಿರುವುದನ್ನು ಕೇಳಿರಬಹುದು. ಆಶ್ಚರ್ಯ ಅಂದ್ರೆ ಸಾಮಾನ್ಯವಾಗಿ ಅವಳಿ ಜವಳಿ ಕರುಗಳು ಹುಟ್ಟೋದಿದ್ರೆ ಕೆಲವೇ ತಾಸುಗಳ ಅಂತರದಲ್ಲಿ ಹುಟ್ಟುತ್ತವೆ.ಆದರೆ ಈ ಎಮ್ಮೆ ಒಂದು ವಾರದ ನಂತರ ಮತ್ತೊಮ್ಮೆ ಕಾರು ಹಾಕಿದೆ !!! ಅದೇ ಜನರನ್ನು ಮತ್ತು ವೈದ್ಯರನ್ನು ಚಕಿತಗೊಳಿಸಿರುವುದು.