ರಾಜ್ಯ ವಾರ್ತೆ

ಮುಂದಿನ ಎರಡು ದಿನ ಭಾರೀ ಮಳೆ : 16 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ


ಬೆಳ್ತಂಗಡಿ:ರಾಜ್ಯದಲ್ಲಿ ಮಳೆಯ ಆರ್ಭಟ
ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಮತ್ತೆ
ಮುಂದಿನ 2 ದಿನ ರಾಜ್ಯಾಧ್ಯಂತ ಭಾರೀ
ಮಳೆಯಾಗಲಿದೆ. ಬೆಂಗಳೂರು ಸೇರಿದಂತೆ
16 ಜಿಲ್ಲೆಗಳಲ್ಲಿ ಭಾರೀ ಮಳೆ ಬೀಳುವ ಹಿನ್ನಲೆಯಲ್ಲಿ ಯೆಲ್ಲೋ
ಅಲರ್ಟ್ ಘೋಷಿಸಲಾಗಿದೆ.
ಈ ಕುರಿತಂತೆ ರಾಜ್ಯ ಹವಾಮಾನ ಇಲಾಖೆ
ಮಾಹಿತಿ ನೀಡಿದ್ದು, ಸಿಲಿಕಾನ್ ಸಿಟಿ ಬೆಂಗಳೂರು, ಕರಾವಳಿ ಜಿಲ್ಲೆಗಳಾದಂತ ಉಡುಪಿ, ದಕ್ಷಿಣ ಕನ್ನಡ ಹಾಗೂ ಮಲೆನಾಡು ಭಾಗಗಳಲ್ಲಿ ಮುಂದಿನ ಎರಡುಸ ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂಬುದಾಗಿ ಮುನ್ಸೂಚನೆ ನೀಡಿದೆ.
ಕಳೆದೊಂದು ವಾರದಿಂದಲೂ ಭಾರೀ
ಪ್ರಮಾಣದಲ್ಲಿ ಕರಾವಳಿಯ ಉಡುಪಿ, ದಕ್ಷಿಣ
ಕನ್ನಡ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದೆ.
ಇದರಿಂದಾಗಿ ಬಹುದೊಡ್ಡ ಅವಾಂತರವೇ
ಸೃಷ್ಠಿಯಾಗಿದೆ. ಇದರ ನಡುವೆಯೂ ಮತ್ತೆ
ಎರಡು ದಿನ ಮಳೆಯಾಗಲಿದೆ ಎಂಬುದಾಗಿ
ತಿಳಿಸಿದೆ.
ಅಕ್ಟೋಬರ್ 16 ಮತ್ತು 17ರಂದು ಗುಡುಗು,
ಸಿಡಿಲು ಸಹಿತ ಭಾರೀ ಮಳೆಯಾಗಲಿದೆ.
ಬೆಂಗಳೂರು ನಗರ, ಗ್ರಾಮಾಂತರ,
ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ
ಮಂಡ್ಯ, ಮೈಸೂರು, ರಾಮನಗರ,
ತುಮಕೂರು, ಉತ್ತರ ಕನ್ನಡ, ಶಿವಮೊಗ್ಗ,
ಉಡುಪಿ, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ ಮತ್ತು
ಚಾಮರಾಜನಗರ ಜಿಲ್ಲೆಗಳಲ್ಲಿ ಭಾರೀ
ಮಳೆಯಾಗಲಿದೆ. ಹೀಗಾಗಿ 2 ದಿನ ಯೆಲ್ಲೋ
ಅಲರ್ಟ್ ಅನ್ನು ಹವಾಮಾನ ಇಲಾಖೆ
ಘೋಷಿಸಿದೆ.

ನಿಮ್ಮದೊಂದು ಉತ್ತರ