30 ವರ್ಷದ ಹಿಂದಿನ ವಿಚಾರಗಳನ್ನು ನೆನಪಿಸಿ ಹರ್ಷ ವ್ಯಕ್ತಪಡಿಸಿದ ಡಾ.ಹೆಗ್ಗಡೆಯವರು ನಮ್ಮ ಮುಂದಿನ ಯೋಜನೆಗೆ ಆಶೀರ್ವಾದಿಸಿದರು.
ಬೆಳ್ತಂಗಡಿ : ಭಾರತ ಸರಕಾರದ *ರಾಜ್ಯಸಭಾ ಸದಸ್ಯರಾಗಿ* ಆಯ್ಕೆಯಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿಗಳು, ಬಡವರ ಮತ್ತು ಮಹಿಳೆಯರ ಏಳಿಗೆಯನ್ನು ಸದಾ ಬಯಸುವ , ಕುಲಾಲ ಸಮುದಾಯದ ಆಶಾಕಿರಣ, *ರಾಜ್ಯಶ್ರೀ, ಪೂಜ್ಯ ಖಾವಂದಾರರದ *ಡಾ. ಡಿ. ವೀರೇಂದ್ರ ಹೆಗ್ಗಡೆ ರವರನ್ನು* ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದಿಂದ ಸಮುದಾಯದ ಪರವಾಗಿ ತಾಲೂಕು ಸಂಘದ ಅಧ್ಯಕ್ಷರಾದ *ಶ್ರೀ ಹರೀಶ್ ಕಾರಿಂಜ* ರವರು ಸ್ಮರಣಿಕೆ, ಹೂ ಗುಚ್ಛ ನೀಡಿ ಸಂಪ್ರದಾಯದಂತೆ ಶ್ರೀ ಕ್ಷೇತ್ರದಲ್ಲಿ ಗೌರವಿಸಿದರು.
ಪೂಜ್ಯರು ನಾವು ನೀಡಿದ ಸ್ಮರಣಿಕೆಯನ್ನು ನೋಡಿ 30 ವರ್ಷದ ಹಿಂದಿನ ವಿಚಾರಗಳನ್ನು ನೆನಪಿಸಿ ಹರ್ಷ ವ್ಯಕ್ತಪಡಿಸಿ, ನಮ್ಮ ಮುಂದಿನ ಯೋಜನೆಗೆ ಆಶೀರ್ವಾದ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಸಂಘದ ಉಪಾಧ್ಯಕ್ಷರಾದ ಹೆಚ್ ಪದ್ಮಕುಮಾರ್, ತಾಲೂಕು ಕುಲಾಲ ಕುಂಬಾರ ಯುವ ವೇದಿಕೆ ಅಧ್ಯಕ್ಷರಾದ ಉಮೇಶ್ ಕುಲಾಲ್, ಕಟ್ಟಡ ಸಮಿತಿಯ ಅಧ್ಯಕ್ಷರಾದ ಸೋಮಯ್ಯ ಮೂಲ್ಯ ಹನೈನಡೆ, ಸದಸ್ಯರುಗಳಾದ ಸಾಂತಪ್ಪ ಮೂಲ್ಯ ಕಲಿಕಾ, ಲೋಕೇಶ್ ಕುಲಾಲ್, ಹರೀಶ್ ಮೂಲ್ಯ, ಶ್ರೀಮತಿ ಲಲಿತಾ ಎ ಕುಲಾಲ್, ಬಿ ಕೆ ಉದಯ ಬಂದಾರು, ಹರಿಶ್ಚಂದ್ರ ಮೂಲ್ಯ, ಶ್ರೀಮತಿ ಶಿಲ್ಪಾ ಹರೀಶ್ ಕಾರಿಂಜ, ಸತೀಶ್ ಕುಲಾಲ್ ಪಿಲ್ಯ, ಸದಾನಂದ ಕುಲಾಲ್ ಸಿರಿಮಜಲ್, ನಾಗಭೂಷಣ್ ಅಳದಂಗಡಿ, ಚಾರ್ಟೆಡ್ ಅಕೌಂಟ್ ಅಭಿನವ್ ಕುಲಾಲ್, ಸತೀಶ್ ಕುಲಾಲ್ ಬಾಳ್ತಾರ, ಪ್ರವೀಣ್ ಕುಲಾಲ್ ಬರಾಯ, ಮಂಜುನಾಥ್ ಕುಲಾಲ್, ಪ್ರಕಾಶ್ ಕುಲಾಲ್, ಸಂತೋಷ್ ಕುಲಾಲ್ ಗೋಳಿಕಟ್ಟೆ ಮುಂತಾದವರು ಉಪಸ್ಥಿತರಿದ್ದರು.