ಮಂಗಳೂರು: ರಾಜ್ಯದಲ್ಲಿ ಇದೀಗ ಪ್ಲೆಕ್ಸ್ ಬ್ಯಾನರ್‌ಗಳ ವಿಚಾರವಾಗಿ ಹಲವೆಡೆ ವಿವಾದ ತಾರಕಕ್ಕೇರಿದ್ದು, ಇದ್ರಿಂದ ಎಚ್ಚೆತ್ತುಕೊಂಡ ದ.ಕ ಜಿಲ್ಲಾಡಳಿತ ನಿನ್ನೆ ಅಧಿಕಾರಿಗಳ ಸಭೆ ನಡೆಸಿದೆ. .
ಮಂಗಳೂರು ಕಮಿಷನರ್ ಶಶಿಕುಮಾರ್, ಎಸ್ಪಿ ಹೃಷಿಕೇಶ್, ಜಿ.ಪಂ ಸಿಇಓ ಕುಮಾರ್, ಪಾಲಿಕೆ ಕಮಿಷನರ್ ಅಕ್ಷಯ್ ಶ್ರೀಧರ್ ಭಾಗಿಯಾದ ಈ ಸಭೆಯಲ್ಲಿ ಜಿಲ್ಲೆಯಲ್ಲಿ ಪ್ಲೆಕ್ಸ್ ಅಳವಡಿಕೆ ಸಂಬಂಧ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅನಧಿಕೃತ ಪ್ಲೆಕ್ಸ್ ಹಾಕಿದ್ರೆ ನಿರ್ದಾಕ್ಷಿಣ್ಯವಾಗಿ ಕ್ರಮ. ತೆಗೆದುಕೊಳ್ಳಬೇಕು ಮತ್ತು ವಿವಾದಾತ್ಮಕ ಪ್ಲೆಕ್ಸ್ ತೆರವಿಗೆ ಪೊಲೀಸ್ ವರದಿಯನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.