ರಾಜ್ಯ ವಾರ್ತೆ

ಹಳೆಯ ಸ್ಕೂಟರ್ ನಲ್ಲಿ ‌‌ ದೇಶ ಸುತ್ತುತ್ತಿರುವ ಮೈಸೂರಿನ ‌‌ತಾಯಿ, ಮಗ ಧರ್ಮಸ್ಥಳ- ಬೆಳ್ತಂಗಡಿ ಗೆ ಭೇಟಿ

ಧರ್ಮಸ್ಥಳ : ಮೈಸೂರಿನ 44ರ ಹರೆಯದ ಕೃಷ್ಣಕುಮಾರ್ ಮತ್ತು ಅವರ ತಾಯಿ 72 ಹರೆಯದ ರತ್ನಮ್ಮ ಸ್ಕೂಟರ್‌ನಲ್ಲೇ ದೇಶ ತೀರ್ಥಯಾತ್ರೆ ಮಾಡಿಸುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾತ್ರೆ ಸಂದರ್ಭ ಆ.19 ರಂದು ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರುಶನ ಪಡೆದು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಈಗಾಗಲೇ ಇವರು 58010 ಕಿ.ಮೀ ಸ್ಕೂಟರಿನಲ್ಲಿ ಸಂಚರಿಸಿದ್ದು, ಇನ್ನು ಪುತ್ತೂರಿಗೆ ಬಳಿಕ ವಿಟ್ಲದ ತಾಯಿಯ ಸ್ನೇಹಿತೆ ಮನೆಗೆ
ತೆರಳದ್ದಾರೆ ಎಂದು ಕೃಷ್ಣ ಕುಮಾರ್ ತಿಳಿಸಿದ್ದಾರೆ.
2018ರಲ್ಲಿ ಮೈಸೂರಿನಿಂದ ಇದೇ, ಸ್ಕೂಟರ್‌ನಲ್ಲಿ ಪ್ರವಾಸ ಆರಂಭಿಸಿದ ತಾಯಿ ಮಗ ಸಮಗ್ರ ಭಾರತ ಸುತ್ತುವ ಸಂಕಲ್ಪ ಮಾಡಿ, ನೇಪಾಲ, ಭೂತನ್, ಮಾಯನ್ಮಾ‌ರ್ ದೇಶಗಳನ್ನೂ ಸಂದರ್ಶಿಸಿದ್ದು ಅಷ್ಟರಲ್ಲಿ ಕೊರೊನಾ ಸಮಸ್ಯೆ ತಲೆದೋರಿದ ಕಾರಣ 2020ರಲ್ಲಿ ಮೈಸೂರಿಗೆ ಹಿಂದಿರಿಗದ್ದು, ಬಳಿಕ ಸ್ಥಳೀಯವಾಗಿಯೇ ಸುತ್ತಾಡುತಿದ್ದೇವೆ ಎಂದು ತಿಳಿಸಿದರು.

ನಿಮ್ಮದೊಂದು ಉತ್ತರ