ಗ್ರಾಮಾಂತರ ಸುದ್ದಿ

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನಭಾಗ್ಯ ಯೋಜನೆಗೆ ಚಾಲನೆ

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ, ಹಿಂದುಳಿದ ವರ್ಗಗಳ ಮೋರ್ಚಾ ಬೆಳ್ತಂಗಡಿ ಇದರ ವತಿಯಿಂದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನಭಾಗ್ಯ ಯೋಜನೆಗೆ ಧನ್ಯವಾದ ನೀಡುವ ವಿಶೇಷ ಕಾರ್ಯಕ್ರಮಕ್ಕೆ ಇಂದು ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಚಾಲನೆ ನೀಡಲಾಯಿತು.

ಶಾಸಕ ಹರೀಶ್ ಪೂಂಜ ಅಕ್ಕಿ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮತನಾಡಿ, ಕಳೆದ 2020   ರಲ್ಲಿ ಕೊರೋನಾ ಮಹಾಮಾರಿ ಆರಂಭಗೊಂಡಾಗ ದೇಶದ ಬಡ ಜನತೆಗೆ ಆಹಾರದ ಕೊರತೆ ಉಂಟಾಗಬಾರದು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ಗರೀಬ್ ಕಲ್ಯಾಣ ಅನ್ನಭಾಗ್ಯ ಯೋಜನೆ ಇದೀಗ ಮತ್ತೆ ಮುಂದಿನ ಸೆಪ್ಟೆಂಬರ್ ವರೆಗೆ ಮುಂದುವರೆಸಿದ್ದು, ಬಡವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ , ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೋಗಿ, ಬೆಳ್ತಂಗಡಿ ತಾಲೂಕು ಸಹಕಾರ ಭಾರತಿ ಅಧ್ಯಕ್ಷರಾದ ರಾಜೇಶ್ ಪೆಂರ್ಬುಡ, ಪಡಂಗಡಿ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಅಂತೋನಿ ಫೆರ್ನಾಂಡೀಸ್,ಪಡಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶೆಟ್ಟಿ, ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ, ಹಿಂದುಳಿದ ವರ್ಗಗಳ ಮೋರ್ಚಾದ ಮಂಡಲ ಅಧ್ಯಕ್ಷ ಪ್ರಭಾಕರ್ ,ಅಳದಂಗಡಿ ಮಹಾಶಕ್ತಿ ಕೇಂದ್ರದ ಪ್ರದಾನ ಕಾರ್ಯದರ್ಶಿ ವಿಶ್ವನಾಥ ಹೊಳ್ಳ,ತಾಲೂಕು ಆಹಾರ ನಿರೀಕ್ಷಕರಾದ ವಿಶ್ವ ಕೆ, ಶಕ್ತಿಕೇಂದ್ರ ಅಧ್ಯಕ್ಷರುಗಳಾದ ಸಂತೋಷ ಕುಮಾರ್ ಜ್ಯೆನ್,ರಾಜೇಶ್ ಆಚಾರ್ಯ ,ಪಡಂಗಡಿ ಕೃ ಷಿಪತ್ತಿನ

ಸಹಕಾರಿ ಸಂಘದ ಕಾರ್ಯನಿರ್ವಾಹಣಾದಿಕಾರಿ ಸುಕೇಶಿನಿ,ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಕವಿತಾ, ಹಿಂದುಳಿದ ವರ್ಗ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಣೇಶ್ ಬಂಗೇರ , ಕುಲಾಲ ಭವನ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಸೋಮಯ್ಯ ಮೂಲ್ಯ ಹನ್ಯೆನಡೆ ಇದ್ದರು. ಸಹಕಾರಿ ಸಂಘದ ನಿರ್ದೇಶಕರುಗಳು,ಗ್ರಾಮ ಪಂಚಾಯತ್ ಸದಸ್ಯರುಗಳು, ಹಾಲಿನ ಸೊಸೈ ಟಿಯ ನಿರ್ದೇಶಕರುಗಳು , ಪಡಂಗಡಿ ಸಿ ಎ ಭ್ಯಾಂಕಿನ ಸಿಬ್ಬಂದಿ ವರ್ಗದವರು ಭಾಗವಹಿಸಿದರು.
ಹಿಂದುಳಿದ ವರ್ಗ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ್ ಕುಲಾಲ್ ಸ್ವಾಗತಿಸಿ, ವಂದಿಸಿದರು.

ನಿಮ್ಮದೊಂದು ಉತ್ತರ