ಗುರುವಾಯನಕೆರೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ಆತ್ರೇಯ ಡಿ.ಎ ಇವರು ಭಾರತದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ 2022 ಎಪ್ರಿಲ್ ನಲ್ಲಿ ನಡೆಸಿದ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಭಾರತದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯು ತನ್ನ ಭೂಸೇನೆ, ವಾಯುಸೇನೆ ಮತ್ತು ನೌಕಾದಳಕ್ಕೆ ಅವಶ್ಯಕವಾದ ಬೌದ್ಧಿಕ, ತಾಂತ್ರಿಕ ಹಾಗೂ ರಕ್ಷಣಾ ಸಂಶೋಧನೆಯ ಕ್ಷೇತ್ರದ ಆಸಕ್ತ ಪ್ರತಿಭೆಗಳನ್ನು ಗುರುತಿಸಿ ಆರ್ಥಿಕ ಪ್ರೋತ್ಸಾಹ ದೊಂದಿಗೆ ಶಿಕ್ಷಣ ನೀಡಿ ಸೇವೆಗೆ ಸಜ್ಜುಗೊಳಿಸುವ ಉದ್ದೇಶದಿಂದ ಪ್ರತಿವರ್ಷ ಎರಡು ಬಾರಿ ಎನ್.ಡಿ.ಎ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತದೆ. ರಾಷ್ಟ್ರೀಯ ಲೋಕಸೇವಾ ಆಯೋಗದ ಸಹಯೋಗದಲ್ಲಿ ನಡೆಯುವ ಈ ಸ್ಪರ್ಧಾತ್ಮಕ ಪರೀಕ್ಷೆಯು ಕಠಿಣವಾದ ಮತ್ತು ವಿಸ್ತ್ರತವಾದ ಪಠ್ಯಕ್ರಮವನ್ನು ಒಳಗೊಂಡಿದೆ. ಕೇವಲ ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳು ಮಾತ್ರ ಇದರಲ್ಲಿ ತೇರ್ಗಡೆ ಹೊಂದುತ್ತಾರೆ.
ಪ್ರಥಮ ಹಂತದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ದ್ವಿತೀಯ ಹಂತದಲ್ಲಿ ಕ್ಲಿಷ್ಟಕರ ಪರೀಕ್ಷೆಯಿದ್ದು ಅಭ್ಯರ್ಥಿಗಳಲ್ಲಿ ಕೇವಲ 0.02 ನಷ್ಟು ಮಾತ್ರ ಅಕಾಡೆಮಿಯ ಉನ್ನತ ವ್ಯಾಸಂಗಕ್ಕೆ ಆಯ್ಕೆಯಾಗುತ್ತಾರೆ
ಆತ್ರೇಯ ಡಿ.ಎ ಇವರು ಉಜಿರೆಯ ಶಿಕ್ಷಕ ದಂಪತಿಗಳಾದ ಅನಂತರಾಮ ನೂರಿತ್ತಾಯ ಮತ್ತು ಸವಿತಾ ಇವರ ಸುಪುತ್ರರಾಗಿದ್ದಾರೆ.