ಮಡಂತ್ಯಾರು: ಶ್ರೀ ಮಹಿಷ ಮರ್ದಿನಿ ಯಕ್ಷಗಾನ ಸಂಘ ಪಾರೆಂಕಿ ಮಡಂತ್ಯಾರು, `ಶ್ರೀ ಅನುಗ್ರಹ ಪಾರೆಂಕಿ’ ಸಹಭಾಗಿತ್ವದಲ್ಲಿ “ಶಾಂಭವಿ ವಿಜಯ” ಯಕ್ಷಗಾನ ತಾಳಮದ್ದಲೆ ಮೇ 3 ರಂದು ಸಂಜೆ ಮಡಂತ್ಯಾರು ಗ್ರಾ.ಪಂ ಸಭಾ ಭವನದಲ್ಲಿ ನಡೆಯಿತು.
ದೀಪ ಪ್ರಜ್ವಲನೆಯೊಂದಿಗೆ ಶ್ರೀ ಶಾಂಭವಿ ವಿಜಯ ಯಕ್ಷಗಾನ ಉತ್ತಮ ರೀತಿಯಲ್ಲಿ ಮೂಡಿ ಬಂತು. ಗೌರವ ವಂದನೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಪ್ರಯೋಜಕರಾದ ಸಂಜೀವ ಅನುಗ್ರಹ ಪಾರೆಂಕಿಯವರು ಪ್ರಾಸ್ತವಿಕವಾಗಿ ಮಾತನಾಡಿ, ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ, ಸ್ವಾಗತಿಸಿದರು. ನಂತರ ಕಲಾ ಸೇವೆಗಾಗಿ ಕಿಶೋರ್ ಶೆಟ್ಟಿ ಮೂಡಯೂರು, ನಾರಾಯಣ ಶೆಟ್ಟಿ ನೆತ್ತರ,
ಉದಯಕುಮಾರ್ ಮದ್ವ, ಪ್ರಭಾಕರ, ಸಂಜೀವ ಅನುಗ್ರಹ ಪಾರೆಂಕಿ, ಸುರೇಶ್ ರೈ ಭಾಗವತರು ಕಲಾ ಪೋಷಕರಾದ ಜಯಾನಂದ ಶೆಟ್ಟಿ, ಪುರುಷೋತ್ತಮ ರೈ, ಮಂಜಯ್ಯ ಶೆಟ್ಟಿ ಮೂಡಬೆಟ್ಟು, ವಿಜಯ ಸಾಲ್ಯಾನ್, ಬಾಲಕೃಷ್ಣ ಬಂಡಾರಿ, ಜಯಂತ ಶೆಟ್ಟಿ ಭಂಡಾರಿಗುಡ್ಡೆ, ಜಯಂತ ಶೆಟ್ಟಿ ಪಾಲೇದು, ಬೇಬಿ ಕುಲಾಲ್ ಪಾರೆಂಕಿ, ಉದಯ ಜೈನ್, ಕೃಷ್ಣ, ನರಸಿಂಹರಾಜ್ ಭಟ್,
ಅರ್ಥಧಾರಿ ಮತ್ತು ಹಿಮ್ಮೇಳದಲ್ಲಿ ತಿಮ್ಮಪ್ಪ ಶೆಟ್ಟಿ ಪಾತಿಲ, ಸುರೇಶ ಶೆಟ್ಟಿ ಮಜಲೋಡಿ, ಕಿಶೋರ್ ಕುಮಾರ್, ಭರತ್ ಶೆಟ್ಟಿ ಹಾರಬೆ, ವೀರೇಂದ್ರ ಶೆಟ್ಟಿ ಕನ್ನಡಿಕಟ್ಟೆ, ದೇವಿಪ್ರಸಾದ್ ಆಚಾರ್ಯ, ಶ್ರೀಪತಿ ಭಟ್ ಉಪ್ಪಿನಂಗಡಿ, ಅತುಲ್ ಕೃಷ್ಣ ಗರ್ಡಾಡಿ, ಚಂದ್ರಶೇಖರ್ ಆಚಾರ್ಯ ಗುರುವಾಯನಕೆರೆ ಇವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿಶೋರ್ ಶೆಟ್ಟಿ ಮೂಡಾಯೂರು, ಅಧ್ಯಕ್ಷರು ಮಹಿಷಮರ್ದಿನಿ ಯಕ್ಷಗಾನ ಸಂಘ ಪಾರೆಂಕಿ ಇವರು ವಹಿಸಿದ್ದರು. ಪ್ರಭಾಕರ ಪಿ.ಎಂ ರವರು ವಂದಿಸಿದರು. ನಾರಾಯಣ ಶೆಟ್ಟಿ ನೆತ್ತರ ಕಾರ್ಯಕ್ರಮ ನಿರೂಪಿಸಿದರು.