ಬೆಳ್ತಂಗಡಿ : ಸುಳ್ಯ ಹಾಗೂ ಕೊಡಗು ಗಡಿ ಪ್ರದೇಶದ ಹಲವೆಡೆ ಇಂದು ಬೆಳಿಗ್ಗೆ ಕೂಡಾ ಭೂಮಿ ಕಂಪಿಸಿದೆ.ಹಲವೆಡೆ ಹಲವು ರೀತಿಯಲ್ಲಿ ಇದರ ಪ್ರತಿಫಲನ ವ್ಯಕ್ತವಾಗಿದೆ. ಭೂಮಿಯೊಳಗಿನಿಂದ ಗುಡುಗಿನ ಶಬ್ದದಂತೆ ಕೇಳಿ ಬಂತು ಎಂದು ಅನೇಕರು ಹೇಳಿಕೊಳ್ಳುತ್ತಿದ್ದಾರೆ.
ಮಲಗಿದ್ದ ನಾನು ಶಬ್ದಕ್ಕೆ ಬೆಚ್ಚಿಬಿದ್ದೆ. ಗಡ ಗಡ ಅಲ್ಲಾಡಿದ ಅನುಭವವಾಯಿತು ಎಂದು ಅರಂಬೂರಿನಿಂದ ಪ್ರಭಾಕರ ನಾಯರ್ ಅನುಭವ ಹೇಳಿಕೊಂಡಿದ್ದಾರೆ.
ಸುಳ್ಯ, ಅರಂತೋಡು, ಸಂಪಾಜೆ, ಪೆರಾಜೆ, ಎಲಿಮಲೆ, ಮರ್ಕಂಜ, ಕೊಡಗು ಸಂಪಾಜೆ ಸೇರಿದಂತೆ ಹಲವು ಭಾಗಗಳಲ್ಲಿ ಈ ಅನುಭವ ಉಂಟಾಗಿದ್ದು ಎಂಟನೇ ಬಾರಿ ಭೂ ಕಂಪನ ದಾಖಲಾಗುತ್ತಿದೆ