ಗ್ರಾಮಾಂತರ ಸುದ್ದಿ

ಮಚ್ಚಿನ ಬಂಗಳಾಯಿ ಎಂಬಲ್ಲಿ ಭಾರೀ ಭೂಕುಸಿತ : ತೋಟಗಳಲ್ಲಿ ಹರಿದ ಪ್ರವಾಹ- ಲಕ್ಷಾಂತರ ರೂ.ಗಳ ಕೃಷಿ ನಾಶ

ಬೆಳ್ತಂಗಡಿ:ಮಚ್ಚಿನ ಬಂಗಳಾಯಿ ಎಂಬಲ್ಲಿ ಸುಮಾರು 75ಅಡಿ ಎತ್ತರದಿಂದ ಭೂಕುಸಿತ ಉಂಟಾಗಿ ಪ್ರವಾಹ ತೋಟದಲ್ಲಿ ಹರಿದ ಪರಿಣಾಮ ಸುಮಾರು 60ಕ್ಕೂ ಹೆಚ್ಚು ಕುಟುಂಬಗಳ ಕೃಷಿ ತೋಟದಲ್ಲಿ ಮಣ್ಣು ಸಹಿತ ಪ್ರವಾಹ‌ ಹರಿದು ಕೃಷಿನಾಶವಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಜು. 10ರಂದು ರಾತ್ರಿ ಬಂಗಳಾಯಿ ಎಂಬಲ್ಲಿ 75 ಅಡಿ ಎತ್ತರದಿಂದ ಧಾರೆ ಕುಸಿದು ಪ್ರವಾಹ ಹರಿಯುತ್ತಿದ್ದ ತೋಡಿಗೆ ಮಣ್ಣು ಬಿದ್ದ ಪರಿಣಾಮ ಮಣ್ಣು ಸಹಿತ ಪ್ರವಾಹ‌ ಬಂಗಳಾಯಿಯಿಂದ ಕಲಾಯಿಯವರೆಗಿನ ಸುಮಾರು 60 ಕುಟುಂಬಗಳ ಕೃಷಿ ತೋಟದಲ್ಲಿ ಹರಿದಿದೆ ಎಂದು‌ ಗ್ರಾ.ಪಂ ಮಾಜಿ ಅಧ್ಯಕ್ಷ ಸದಾನಂದ ಮಡಪ್ಪಾಡಿ ಮಾಹಿತಿ ನೀಡಿದ್ದಾರೆ.

ಭೂ ಕುಸಿತ ಬಗ್ಗೆ ತಾಲೂಕು ಆಡಳಿತ, ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಲಾಗಿದೆ . ಗ್ರಾ.ಪಂ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ ಹಾಗೂ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿಮ್ಮದೊಂದು ಉತ್ತರ