ಬೆಳ್ತಂಗಡಿ: ಮಿತ್ತಬಾಗಿಲು ಗ್ರಾಮದ ಗಣೇಶ್ ನಗರ ಹಾಗೂ ಮಲವಂತಿಗೆ ಗ್ರಾಮದ ಅಂಗನವಾಡಿ ಹಾಗೂ ಸರಕಾರಿ ಪ್ರೌಢ ಶಾಲೆ ಕಜಕೆ
ಮಲವಂತಿಗೆ, ದಿಡುಪೆ ಭಾಗದ ಮಳೆ ಹಾನಿ ಪ್ರದೇಶಗಳಿಗೆ ಜು.9ರಂದು ತಹಶೀಲ್ದಾರ್ ಪೃಥ್ವಿ ಸಾನಿಕಮ್ ಅವರು ಭೇಟಿ ನೀಡಿದರು.
ಮಳೆ ನೀರಿನ ಮಟ್ಟ ಜಾಸ್ತಿ ಇರುವ ನದಿ ತೀರದ ಮನೆ ಮನೆಗೆ ಭೇಟಿ ನೀಡಿ ತೊಂದರೆಗೊಳಗಾದ
ಸ್ಥಳೀಯರಲ್ಲಿ ಜಾಗೃತಿ ಮೂಡಿಸಿದರು ಮತ್ತು ಗುಡ್ಡ ಭಾಗದ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬಿ ಕಾಳಜಿ ಕೇಂದ್ರ ವ್ಯವಸ್ಥೆ ಮಾಡಿರುವ
ಬಗ್ಗೆ ಮಾಹಿತಿ ನೀಡಿದರು.