ಬೆಳ್ತಂಗಡಿ: ಕಣ್ಣೂರು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ ಡಿಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸ ರ್ ಕೊಡ್ಲಿಪೇಟೆ ದಲಿತರ ಕುರಿತು ಪ್ರಚೋದನಕಾರಿ ಭಾಷಣ ಇದೀಗ ವೈರಲ್ ಆಗಿದ್ದು, ದಲಿತ ದೌರ್ಜನ್ಯ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿ ಎಂದು ಬೆಳ್ತಂಗಡಿ ಆರಕ್ಷಕ ಠಾಣೆ ಉಪನಿರೀಕ್ಷರಿಗೆ ದ.ಕ ಬಿಜೆಪಿ ಪ್ರಕಾಶನ ಪ್ರಕೋಷ್ಠ ಸಂಚಾಲಕ ಸುಜಿತ್ ರಾಜ್ ದೂರು ನೀಡಿದ್ದಾರೆ.
ಎಸ್ ಡಿ ಪಿ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲುಪೇಟೆ ಕಣ್ಣೂರು ಮೈದಾನದಲ್ಲಿ ಭಾಷಣ ಮಾಡುವ ಭರದಲ್ಲಿ “ದಲಿತರ ಮೈಯಲ್ಲಿ ದನದ ಮಾಂಸ ತಿಂದ ರಕ್ತ ಹರಿಯುತ್ತಿದೆ’ ಎಂದು ಹೇಳಿಕೆ ನೀಡಿದ್ದು, ಇದು ದಲಿತ ಸಮಾಜಕ್ಕೆ ಅವಮಾನ. ಇಡೀ ದಲಿತ ಸಮಾಜವನ್ನು ಅವಮಾನ ಮಾಡಿದ ಅಪ್ಸರ್. ಕೊಡ್ಲುಪೇಟೆಯವರ ಮೇಲೆ ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅನಂತ ಮುಂಡಾಜೆ, ಜಯಂತ್ ಜಾನು ಕೂಡ.