ಕರಂಬಾರು : ಇಲ್ಲಿನ ದುರ್ಗಾ ನಿವಾಸದ ದಿ. ಕೊರಗಪ್ಪ ಪೂಜಾರಿಯವರ ಧರ್ಮಪತ್ನಿ ಸುಶೀಲಾ (78ವ) ಅವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೇ.30 ರಂದು ನಿಧನರಾದರು.
ಮೃತರು ಪುತ್ರರಾದ ಉದ್ಯಮಿ ಜನಾರ್ಧನ ಬಂಗೇರ, ಮುಂಬಯಿ ಉದ್ಯಮಿ ಪ್ರಶಾಂತ್,ಪ್ರಗತಿಪರ ಕೃಷಿಕ ಪ್ರಮೋದ್, ಮುಂಬಯಿ ಉದ್ಯಮಿ ಸುರೇಶ್ ಪೂಜಾರಿ, ಪುತ್ರಿಯರಾದ ಭವಾನಿ ಸದಾನಂದ ಪೂಜಾರಿ ಉಂಗೀಲಬೈಲು, ಯಶೋಧ ಪುರುಷೋತ್ತಮ ಗೋಳಿಯಂಗಡಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.