ಕ್ರೈಂ ವಾರ್ತೆ

ಪುಂಜಾಲಕಟ್ಟೆ: ಬೈಕ್ ಗಳ ಭೀಕರ ಅಪಘಾತ ಕಾಲೇಜು ವಿದ್ಯಾರ್ಥಿ ಮಹಮ್ಮದ್ ಶಫೀಕ್ ಸ್ಥಳದಲ್ಲೇ ಮೃತ್ಯು

ಪುಂಜಾಲಕಟ್ಟೆ:ಕರಾಯದಿಂದ ಮಂಗಳೂರಿಗೆ ಸಾಗುತ್ತಿದ್ದ ಬೈಕ್ ಹಾಗೂ ಪುಂಜಾಲಕಟ್ಟೆಯಿಂದ ಮಡಂತ್ಯಾರ್ ಕಡೆ ಬರುತ್ತಿದ್ದ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಕರಾಯ ನಿವಾಸಿ ಮಹಮ್ಮದ್ ಶಫೀಕ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಆ.29ರಂದು ಮುಂಜಾನೆ ನಡೆದಿದೆ.

ಶಫೀಕ್ ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ತೆರಳುತ್ತಿರುವ ವೇಳೆ ಈ ಘಟನೆ ಸಂಭವಿಸಿದೆ.


ಇನ್ನೊಂದು ಬೈಕ್ ನಲ್ಲಿದ್ದವರು ಮಡಂತ್ಯಾರಿನ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುವವರು ಎನ್ನಲಾಗಿದೆ. ಸ್ಥಳಕ್ಕೆ ಪುಂಜಾಲಕಟ್ಟೆ‌  ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. .

ನಿಮ್ಮದೊಂದು ಉತ್ತರ