ಕಟೀಲು: ಖ್ಯಾತ ಯಕ್ಷಗಾನ ಕಲಾವಿದರಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಕಟೀಲು ಸಮೀಪ ಉಲ್ಲಂಜೆ ಎಂಬಲ್ಲಿ ಇಂದು ನಡೆದಿದೆ.
ಕೊಡೆತ್ತೂರು ನಿವಾಸಿ ಶಂಭುಕುಮಾರ್ (48ವ)ಆತ್ಮಹತ್ಯೆ ಮಾಡಿಕೊಂಡ ಯಕ್ಷಗಾನ ಕಲಾವಿದರು.
ಪುತ್ತೂರು, ಬಪ್ಪನಾಡು ಹಾಗೂ ಕಟೀಲು ಮೇಳಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದ ಇವರು, ಹಳೆಯಂಗಡಿ ಸಮೀಪದ ಹೊಯಿಗೆ ಗುಡ್ಡೆ ಉಮಾಮಹೇಶ್ವರ ದೇವಸ್ಥಾನದ ಹೆಸರಿನಲ್ಲಿ ಚಿಕ್ಕ ಮೇಳವನ್ನು ನಡೆಸುತ್ತಿದ್ದರು. ಆರ್ಥಿಕ ಸಮಸ್ಯೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಮೂಲ ಭೇಟಿ ನೀಡಿ ಪರಿಶೀಲನೆ.