ನಡ: ಹಿಂಸಾತ್ಮಕವಾಗಿ ಅಕ್ರಮ ಗೋಸಾಗಾಟ ಮಾಡುತ್ತಿದ್ದ ವಾಹನವನ್ನು ಖಚಿತ ಮಾಹಿತಿಯಿಂದ ಸ್ಥಳೀಯರ ಸಹಕಾರದೊಂದಿಗೆ ತಡೆದು ಗೋ ಕಳ್ಳರನ್ನು ಪೊಲೀಸರು ಬಂಧಿಸಿದ ಘಟನೆ ಕಳೆದ ರಾತ್ರಿ ನಡ ಗ್ರಾಮದ ಬಳಿ ನಡೆದಿದೆ.
ನಡ ಗ್ರಾಮದ ನರಸಿಂಹಗಡ( ಗಡಾಯಿಕಲ್ಲು) ರಸ್ತೆಯಲ್ಲಿ ಕ್ವಾಲೀಸ್ ವಾಹನವೊಂದು ಅನುಮಾನಸ್ಪದವಾಗಿ ಸಾಗುತ್ತಿದ್ದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಸಂದರ್ಭದಲ್ಲಿ ಕೂಡಲೇ ಪೋಲಿಸರು ಆಗಮಿಸಿದ್ದು, ಪೊಲೀಸರು ವಾಹನವನ್ನು ನಿಲ್ಲಿಸಲು ಸೂಚಿಸಿದರೂ ವಾಹನ ಚಾಲಕ ಪೋಲೀಸರ ಮೇಲೆಯೇ ವಾಹನ ಹತ್ತಿಸಿ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದು ಬಳಿಕ ಸ್ಥಳೀಯರ ಸಹಕಾರದೊಂದಿಗೆ ಪೊಲೀಸರು ತಡೆದಿದ್ದಾರೆ.
ಈ ವೇಳೆ ಚಾಲಕ ತಪ್ಪಿಸಿಕೊಂಡಿದ್ದು ಉಳಿದ ಮೂವರನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಸಂದರ್ಭ ವಾಹನದಲ್ಲಿ 5 ಗೋವುಗಳು ಹಿಂಸಾತ್ಮಕ ರೀತಿಯಲ್ಲಿ ಇರುವುದು ಕಂಡು ಬಂದಿದೆ. ಗೋವುಗಳನ್ನು ಗುರುವಾಯನಕೆರೆ ಬಳಿಯ ಕಸಾಯಿಖಾನೆಗೆ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.