ಕ್ರೈಂ ವಾರ್ತೆ

ಕಡಬ ; ಸ್ವಾತಂತ್ರ್ಯ ಧ್ವಜಾರೋಹಣ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ನಿವೃತ್ತ ಸೈನಿಕ ಮೃತ್ಯು

[8/15, 5:18 PM] B.S Kulal: ಪುತ್ತೂರು: ಸ್ವಾತಂತ್ರ್ಯ ಧ್ವಜಾರೋಹಣ ಕಾರ್ಯಕ್ರಮ ನಡೆಸುತ್ತಿದ್ದಾಗಲೇ ನಿವೃತ್ತ ಸೈನಿಕರೊಬ್ಬರು ಕುಸಿದು ಬಿದ್ದು ಸಾವನಪ್ಪಿದ ಘಟನೆ ಕಡಬ ತಾಲೂಕಿನ ಕುಟ್ರುಪಾಡಿ ಎಂಬಲ್ಲಿ ಆ.150ರಂದು ನಡೆದಿದೆ.

ಮೃತರನ್ನು ನಿವೃತ್ತ ಸೈನಿಕ ಗಂಗಾಧರ ಗೌಡ ಎಂದು ಗುರುತಿಸಲಾಗಿದೆ. ಹೊಸಮಠ ಸಿ.ಎ. ಬ್ಯಾಂಕಿನ ಮಾಜಿ ಅಧ್ಯಕ್ಷ ಎನ್. ಕರುಣಾಕರ ಗೋಗಟೆ ಧ್ವಜಾರೋಹಣ ಮಾಡಲು ಸಿದ್ಧತೆ ನಡೆಸುತ್ತಿದ್ದಾಗ ಅವರಿಗೆ ನಿವೃತ್ತ ಸೈನಿಕ ಗಂಗಾಧರ ಗೌಡ ಅವರು ದ್ವಜ ವಂದನೆಯ ಮಾಹಿತಿ ನೀಡುತ್ತಿದ್ದರು. ಧ್ವಜಾರೋಹಣಕ್ಕೆ ಸಿದ್ದವಾಗುತ್ತಿದ್ದಾಗಲೇ ಗಂಗಾಧರ ಗೌಡ ದಿಢೀರ್ ಆಗಿ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದು ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ.

ನಿಮ್ಮದೊಂದು ಉತ್ತರ