ಬೆಳ್ತಂಗಡಿ: ಬಿಎಸ್ಎನ್ಎಲ್ ನಿವೃತ್ತ ಉದ್ಯೋಗಿ , ಮಂಗಳೂರಿನಲ್ಲಿ ಜೆಇ ಆಗಿದ್ದ ರಾಜೇಂದ್ರ ನಾಯ್ಕ ಮಾಪಲಾಡಿ ಅವರು ಆ. 17 ರಾತ್ರಿ ನಿಧನರಾದರು.ಕಳೆದ 4 ದಿನಗಳ ಹಿಂದೆ ಲಘ ಹೃದಯಘಾತಕ್ಕೊಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸ್ಟಂಟ್ ಹಾಕಿಸಿ ಮನೆಗೆ ಬಂದಿದ್ದರು.
ಆದರೆ ಕಳೆದ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಆರೋಗ್ಯದಲ್ಲಿ ಏರುಪೇರಾದ ತಕ್ಷಣ ಆಸ್ಪತ್ರೆಗೆ ಕೊಂಡೊಗುವಷ್ಟರಲ್ಲಿ ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ವಿವಿಧ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತನ್ನನ್ನು ತಾನು ಗುರುತಿಸಿಕೊಂಡಿರುವ ಅವರು ಬೆಳ್ತಂಗಡಿಯ ನಾಟಕ ಕಲಾವಿದರಾಗಿ, ಮೇಲಂತಬೆಟ್ಟು ಬದಿಯಲ್ಲಿ ನಾಗಬ್ರಹ್ಮ ಸಂಘದ ಬ್ರಹ್ಮಕಲಶೋತ್ಸವದ ಪ್ರಧಾನ ಕಾರ್ಯದರ್ಶಿಯಾಗಿ, ಬೆಳ್ತಂಗಡಿ ಶಾರದೋತ್ಸವ ಸಮಿತಿಯ ಅಧ್ಯಕ್ಷರಾಗಿ ಮೇಲಂತಟ್ಟುಬೆ ಶ್ರೀ ದೇವಿ ಭಗವತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿದ್ದಾರೆ. ಎಲ್ಲರೊಂದಿಗೆ ಆತ್ಮೀಯರಾಗಿ ಬೆರೆಯುವ ಮನೋಭಾವ ಹೊಂದಿದ್ದರು. ಮೃತರು ಪತ್ನಿ ಮಕ್ಕಳು ಸೇರಿದಂತೆ ಬಂಧುಬಳಗವನ್ನು ಅಗಲಿದ್ದಾರೆ.ಅಂತಿಮ ಸಂಸ್ಕಾರ ಲಾಯಿಲದ ಮುಕ್ತಿಧಾಮದಲ್ಲಿ ಇಂದು ಮಧ್ಯಾಹ್ನ ನೆರವೇರಲಿದೆ