ಉಜಿರೆ: ತೆಂಗಿನ ಕಾಯಿ ತೆಗೆಯಲೆಂದು ಮರ ಹತ್ತಿದ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು, ಸಾವನ್ನಪ್ಪಿದ ಜು.27ರಂದು ಉಜಿರೆ ಗ್ರಾಮದ ನಿನ್ನಿಕಲ್ಲು ಎಂಬ ಘಟನೆ ನಡೆದಿದೆ.
ಉಜಿರೆ ಗ್ರಾಮದ ನಿನ್ನಿಕಲ್ಲು ಪಾಲೆಂಜ ನಿವಾಸಿ ಆನಂದ (40ವ) ಈ ಘಟನೆಯಲ್ಲಿ ಮೃತಪಟ್ಟವರು. ಜು. 27ರಂದು ಮಧ್ಯಾಹ್ನ ತಮ್ಮ ಮನೆಯ ಬಳಿಯ ತೆಂಗಿನ ಮರಕ್ಕೆ ತೆಂಗಿನ ಕಾಯಿ ತೆಗೆಯಲೆಂದು ಅವರು ಮರ ಹತ್ತಿದಾಗ ಆಕಸ್ಮಿಕವಾಗಿ ಕಾಲು ಜಾರಿ ಮರದಿಂದ ಕೆಳಗೆ ಬಿದ್ದರೆನ್ನಲಾಗಿದೆ. ಕೂಡಲೇ ಅವರ ಮನೆಯವರು ಹಾಗೂ ಸ್ಥಳೀಯರು ಉಜಿರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದುದಾಗ ಅವರು ಸಾವನ್ನಪ್ಪಿದರೆಂದು ವರದಿಯಾಗಿದೆ . ಮೃತ ಆನಂದ ಅವರು ಬದಲಿ ಚಾಲಕರಾಗಿ ಮತ್ತು ತೆಂಗಿನ ಕಾಯಿ ತೆಗೆಯಲು, ಅಡಿಕೆ ಮರಕ್ಕೆ ಜೌಷಧಿ ಸಿಂಪಡಣೆ ಕೆಲಸಗಳಿಗೆ ಸ್ಥಳೀಯವಾಗಿ ಹೋಗುತ್ತಿದ್ದು,, ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಮೃತರು ಪತ್ನಿ ಸುಮತಿ, ಪುತ್ರಿ ಹರಿಪ್ರಿಯ ಪುತ್ರ ಯಶವಂತ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.