ಬೆಳ್ತಂಗಡಿ: ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ಕೊಲೆಗೈದ ಆರೋಪಿಗಳನ್ನು ಕೂಡಲೇ ಬಂಧಿಸಿ, ಉಗ್ರ ಶಿಕ್ಷೆಗೆ ಒಳಡಿಸುವಂತೆ ಒತ್ತಾಯಿಸಿ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ,
ಯುವ ಬಿಲ್ಲವ ವೇದಿಕೆ ಬೆಳ್ತಂಗಡಿ, ಬಿಲ್ಲವ ಮಹಿಳಾ ವೇದಿಕೆ ಬೆಳ್ತಂಗಡಿ, ಯುವವಾಹಿನಿ ಬೆಳ್ತಂಗಡಿ ಮತ್ತು ವೇಣೂರು ಘಟಕದ ನೇತೃತ್ವದಲ್ಲಿಜು.೨೭ರಂದು ಸಂಜೆ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಮೊಂತ್ತಿ ಬೆಳಗಿ, ಮಾನವ ಸರಪಳಿ ರಚಿಸಿ, ಮೌನ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಎಲ್ದಡ್ಕ, ಸಂಘಟನೆಗಳ ಪ್ರಮುಖರಾದ ಪಿತಾಂಬರ ಹೇರಾಜೆ, ಸುಜಿತಾ ವಿ. ಬಂಗೇರ, ಜಯವಿಕ್ರಮ ಕಲ್ಲಾಪು, ಶೇಖರ ಬಂಗೇರ, ಸುಜಾತ ಅಣ್ಣಿ ಪೂಜಾರಿ, ಶೈಲೇಶ್ ಕುರ್ತೋಡಿ, ಮನೋಹರ ಇಳಂತಿಲ, ಜಗದೀಶ್ ಡಿ, ಉಮೇಶ್, ಲಕ್ಷ್ಮಣ ಪೂಜಾರಿ, ರಮೇಶ್ ಪೂಜಾರಿ ಪಡ್ಡಾಯಿ, ಶಾಂಭವಿ ಬಂಗೇರ, ಪ್ರವೀಣ್‌ಕುಮಾರ್ ಹೆಚ್.ಎಸ್, ರಂಜಿತ್ ಹೆಚ್.ಡಿ, ಯಶೋಧರ ಚಾರ್ಮಾಡಿ, ಯೋಗೀಶ್ ಬಿಕ್ರೋಟ್, ಚಂದ್ರಹಾಸ ಕೇದೆ, ಎಂ.ಕೆ ಪ್ರಸಾದ್, ಹರೀಶ್ ಸುವರ್ಣ, ಅಶ್ವತ್ಥ್ ಕುಮಾರ್, ನವೀನ್ ಪಚೇರಿ, ಸುನೀಲ್ ಧರ್ಮಸ್ಥಳ, ರಾಜೀವ ಸಾಲಿಯಾನ್, ಹರೀಶ್ ಪೊಕ್ಕಿ, ಜನಾರ್ದನ ಮಾಲಾಡಿ, ದಿನೇಶ್ ಕೋಟ್ಯಾನ್, ರಮಾನಂದ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.