ಕ್ರೈಂ ವಾರ್ತೆ

ಟ್ರಿ ಬೈಕ್ ನ ರೋಪ್ ಜಾರಿ ಅಡಿಕೆ ಮರದಿಂದ ಬಿದ್ದು ಗ್ರಾ.ಪಂ ಮಾಜಿ ಅಧ್ಯಕ್ಷ ನಿತ್ಯಾನಂದ ರೈ ಗಾಯ

ಬೆಳ್ತಂಗಡಿ : ಔಷಧಿ ಸಿಂಪಡಣೆಯ ವೇಳೆ ಅಡಿಕೆ ಮರಕ್ಕೆ ಹತ್ತುವ ಟ್ರಿ ಬೈಕ್ ನ ರೋಪ್ ಜಾರಿದ ಪರಿಣಾಮ ಕೆಳಗೆ ಬಿದ್ದು ಗ್ರಾ.  .ಪಂ ಮಾಜಿ ಅಧ್ಯಕ್ಷ ನಿತ್ಯಾನಂದ ರೈ (45ವ) ಗಾಯಗೊಂಡಿರುವ ಘಟನೆ ಇಂದು ಸಂಜೆ ಕಳೆಂಜದಲ್ಲಿ ನಡೆದಿದೆ .ಇಂದು ಮಳೆ ಕಡಿಮೆ ಇದ್ದಿದ್ದರಿಂದ ಕಳೆಂಜ ಗ್ರಾಮದ ಗುತ್ತಿಮಾರು ನಿವಾಸಿ ನಿತ್ಯಾನಂದ ರೈ ತಮ್ಮತೋಟದಲ್ಲಿ ಅಡಿಕೆ ಮರಕ್ಕೆ ಜಾಷಧಿ ಬಿಡುತ್ತಿದ್ದ ವೇಳೆ ಮರಕ್ಕೆ ಹತ್ತುವ ಟೀ ಬೈಕ್ ನ ರೋಪ್ ಜಾರಿ ಅವರು ಕೆಳಗೆ ಬಿದ್ದು ತಲೆಗೆ ಹಾಗೂ ಕುತ್ತಿಗೆ ಭಾಗಕ್ಕೆ ಗಾಯಗೊಂಡಿದ್ದಾರೆ. ತಕ್ಷಣ ಮನೆಯವರು ಹಾಗೂ ಸ್ಥಳೀಯರು ಅವರನ್ನು ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ನಿಮ್ಮದೊಂದು ಉತ್ತರ